Monday, October 18, 2021

ಮಗನಿಗೆ ಮೊಬೈಲ್‌ ಕೊಟ್ಟು 1.33 ಲಕ್ಷ ರೂ. ಜೊತೆಗೆ ಕಾರು ಮಾರಿದ ತಂದೆ

ಮಂಗಳೂರು: ಆಟವಾಡಲೆಂದು ಮಗನ ಕೈಗೆ ಮೊಬೈಲ್‌ ಕೊಟ್ಟ ಅಪ್ಪ 1.33 ಲಕ್ಷ ರೂಪಾಯಿ ಕಳೆದು ಜೊತೆಗೆ ತನ್ನಲ್ಲಿದ್ದ ಕಾರನ್ನು ಮಾರುವ ಸ್ಥಿತಿಗೆ ಬಂದಿದ್ದಾರೆ. ಈ ಘಟನೆ ನಡೆದಿದ್ದು ಬ್ರಿಟನ್​ನ ನಾರ್ತ್​ ವೇಲ್ಸ್​ನಲ್ಲಿ.


ಮುಹಮ್ಮದ್​ ಮುತಾಜಾ ಎಂಬುವವರು ವೃತ್ತಿಯಲ್ಲಿ ವೈದ್ಯರು, ಇವರ 7 ವರ್ಷದ ಅಶಾಜ್​ ಎಂಬ ಬಾಲಕ ಡ್ರ್ಯಾಗನ್ಸ್​: ರೈಸ್​ ಆಫ್ ಬರ್ಕ್​ ಎಂಬ ಗೇಮ್​ ಆಡಿದ್ದು, ಸುಮಾರು 1 ಗಂಟೆ ಅವಧಿಯಲ್ಲಿ ಅದರ ಬೇರೆ ಬೇರೆ ಹಂತಗಳನ್ನು ಆಡುತ್ತಾ 1.99 ಯುರೋ ಮೊತ್ತದಿಂದ 99.99 ಯುರೋ ತನಕ ಹಣ ಪಾವತಿಸುತ್ತಲೇ ಹೋಗಿದ್ದಾನೆ. ಒಂದು ಗಂಟೆಯಲ್ಲಿ ಸುಮಾರು 1,289.70 ಯುರೋ ಪಾವತಿಯಾಗಿದ್ದು ಅದರ ಒಟ್ಟು ಮೊತ್ತ ಭಾರತೀಯ ರೂಪಾಯಿಯಲ್ಲಿ ₹1.33 ಲಕ್ಷ ಆಗಿದೆ.
ತಂದೆ ಮುಹಮ್ಮದ್​ ಮುತಾಜಾ ಅವರಿಗೆ ಇದು ಮೊದಮೊದಲು ಗಮನಕ್ಕೆ ಬಂದಿರಲಿಲ್ಲ. ಆದರೆ, ತನ್ನ ಮೊಬೈಲ್​ಗೆ ಬಂದಿದ್ದ ಇಮೇಲ್​ಗಳನ್ನು ಪರಿಶೀಲಿಸುತ್ತಾ ಹೋದಂತೆ ಫ್ರೀ ಗೇಮ್​ ಒಂದು ಇಷ್ಟು ಹಣ ಪಾವತಿಗೆ ಅವಕಾಶ ನೀಡಿದೆ ಎಂದು ಗೊತ್ತಾಗಿದೆ. ಈ ಬಗ್ಗೆ ಆ್ಯಪಲ್​ ಸಂಸ್ಥೆಗೆ ದೂರು ಸಲ್ಲಿಸಿದ ನಂತರ ಅದು ಸುಮಾರು 207 ಯುರೋ (ಅಂದಾಜು 21 ಸಾವಿರ ರೂಪಾಯಿ) ಹಣವನ್ನು ಹಿಂದಿರುಗಿಸಿದೆಯಾದರೂ ಬಾಕಿ ಮೊತ್ತ ವಾಪಾಸ್ಸು ಸಿಕ್ಕಿಲ್ಲ. ಅಲ್ಲದೇ, ಉಳಿದ ನಷ್ಟವನ್ನು ಭರಿಸಲಾಗದೇ ಅವರು ತಮ್ಮ ಬಳಿಯಿದ್ದ ಕಾರ್​ ಮಾರಬೇಕಾಗಿ ಬಂದಿದೆ. ಚಿಕ್ಕ ಮಕ್ಕಳ ಗೇಮ್​ ಒಂದು ಅಷ್ಟು ದೊಡ್ಡ ಮೊತ್ತವನ್ನು ಸ್ವೀಕರಿಸಿದ್ದು ಹೇಗೆ ಎಂಬ ಪ್ರಶ್ನೆ ಎತ್ತಿರುವ ಬಾಲಕನ ತಂದೆ ಇದೀಗ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...