Connect with us

ಶಾಸಕ ಖಾದರ್ ತಲೆ ಕಡಿಯುತ್ತೇವೆ ಹೇಳಿಕೆಯ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

Published

on

ಶಾಸಕ ಖಾದರ್ ತಲೆ ಕಡಿಯುತ್ತೇವೆ ಹೇಳಿಕೆಯ ವಿರುದ್ಧ ಕಾವೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲು

ಮಂಗಳೂರು : ಶಾಸಕ ಯು.ಟಿ.ಖಾದರ್ ತಲೆ ಕಡಿಯುತ್ತೇವೆ ಹೇಳಿಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.ಕಾವೂರು ಪೋಲೀಸ್ ಠಾಣೆಯಲ್ಲಿ ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ನೇತೃತ್ವದಲ್ಲಿ ಈ ದೂರು ದಾಖಲಾಗಿದೆ. ಮಂಗಳೂರಿನಲ್ಲಿ ಸಿಎಎ ಪರ ನಡೆದ ಸಭೆಯಲ್ಲಿ ಭಾಗವಹಿಸಿದ ಕೆಲ ಬಿಜೆಪಿ ಕಾರ್ಯಕರ್ತರು ಮಾಜಿ ಸಚಿವ ಯು.ಟಿ.ಖಾದರ್ ರವರ ತಲೆ ಕಡಿಯುತ್ತೇವೆಂಬ ಎಂಬ ಹೇಳಿಕಯ ವಿರುದ್ಧ ಕಾವೂರು ಪೋಲೀಸ್ ಠಾಣೆಯಲ್ಲಿ ಮಂಗಳೂರು ಯುವ ಕಾಂಗ್ರೆಸ್ ನಿಂದ ದೂರು ದಾಖಲಿಸಲಾಯಿತು.

ಮಂಗಳೂರು ಯುವ ಕಾಂಗ್ರೆಸ್ ಅಧ್ಯಕ್ಷ ರವೂಫ್ ಸಿ ಎಂ,ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಅರುಣ್ ಈಶ್ವರ ಉಳ್ಳಾಲ ಹಾಗೂ ನಾಸಿರ್ ಸಾಮಣಿಗೆ,ಮಂಗಳೂರು ಯುವ ಕಾಂಗ್ರೆಸ್ ಕಾರ್ಯದರ್ಶಿ ಶಮೀರ್ ಪಜೀರ್ ,ಹಾಶೀರ್ ಪೇರಿಮಾರ್,ಗೋಪಾಲ ತಚ್ಚಾನಿ,ಕಿನ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಅನ್ಸಾರ್ ಕಿನ್ಯ,ಜಾಫರ್ ಉಳ್ಳಾಲ,ಹಿಶಾಮ್ ಫರಂಗಿಪೇಟೆ,ಮುರಲೀಧರ್ ಶೆಟ್ಟಿ ನರಿಂಗಾನ,ಯೂಸುಫ್ ಉಚ್ಛಿಲ,ರಿಳ್ವಾನ್ ಫರಂಗಿಪೇಟೆ, ಮುಂತಾದವರು ಉಪಸ್ಥಿತರಿದ್ದರು.

ವಿಡಿಯೋಗಾಗಿ..

Click to comment

Leave a Reply

Your email address will not be published. Required fields are marked *

LATEST NEWS

ಹೊಸ ವರ್ಷದ ಮೊದಲ ದಿನವೇ ಗ್ರಾಹಕರಿಗೆ ಗುಡ್ ನ್ಯೂಸ್ !

Published

on

ಮಂಗಳೂರು: ಹೊಸ ವರ್ಷದ ಸಂಭ್ರಮದಲ್ಲಿದ ಜನರಿಗೆ ಈಗ ಗೂಡ್ ನ್ಯೂಸ್ ಒಂದು ಸಿಕ್ಕಿದೆ. ಎಲ್ ಪಿಜಿ ಗ್ಯಾಸ್ ಸಿಲಿಂಡರ್ ರಿಫಿಲ್ ಮತ್ತಷ್ಟು ಅಗ್ಗವಾಗಿದೆ.

ಸರ್ಕಾರಿ ತೈಲ ಕಂಪನಿಗಳು ಎಲ್ ಪಿಜಿ ಸಿಲಿಂಡರ್ ಗಳ ಬೆಲೆಯಲ್ಲಿ ಇಳಿಕೆ ಮಾಡಲು ನಿರ್ಧರಿಸಿದ್ದು, ಮಧ್ಯರಾತ್ರಿಯಿಂದಲೇ ಪರಿಷ್ಕೃತ ದರ ಜಾರಿಯಲ್ಲಿದೆ.

ಎಲ್ ಪಿಜಿ ಸಿಲಿಂಡರ್ ಬೆಲೆಯಲ್ಲಿ ಇಳಿಕೆ
ಪ್ರತಿ ಎಲ್​​ಪಿಜಿ ಸಿಲಿಂಡರ್ ಬೆಲೆಯಲ್ಲಿ 14.50 ರೂಪಾಯಿ ಇಳಿಕೆ ಆಗಿದೆ. ದೆಹಲಿಯಲ್ಲಿ ಎಲ್‌ಪಿಜಿ ಸಿಲಿಂಡರ್‌ನ ಹೊಸ ಬೆಲೆ 1818.50 ರೂಪಾಯಿಯಿಂದ 1804 ರೂಪಾಯಿಗೆ ಇಳಿಕೆ ಆಗಿದೆ. ತೈಲ ಮಾರುಕಟ್ಟೆ ಕಂಪನಿಗಳು ಪ್ರತಿ ತಿಂಗಳ ಮೊದಲನೇ ದಿನದಂದು ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಪರಿಶೀಲಿಸಿ ಹೊಸ ಬೆಲೆ ಪ್ರಕಟಿಸುತ್ತವೆ.

ಹೊಸ ವರ್ಷದಂದು ತಮ್ಮ ಗ್ರಾಹಕರಿಗೆ 19 ಕೆಜಿ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ಕಡಿಮೆ ಮಾಡಲು ನಿರ್ಧರಿಸಿವೆ. ಕೋಲ್ಕತ್ತಾದಲ್ಲಿ 1911 ರೂಪಾಯಿಗೆ ಇಳಿಕೆ ಆಗಿದೆ. ಈ ಮುಂಚೆ 1927 ರೂಪಾಯಿ ಪಾವತಿ ಮಾಡಬೇಕಾಗಿತ್ತು. ಮುಂಬೈನಲ್ಲಿ ಸಿಲಿಂಡರ್ ಬೆಲೆ 1756 ರೂಪಾಯಿಗೆ ಇಳಿಕೆ ಆಗಿದೆ. ಚೆನ್ನೈನಲ್ಲಿ ಇವತ್ತಿನಿಂದ 19 ಕೆಜಿ ಸಿಲಿಂಡರ್​ಗೆ 1966 ರೂಪಾಯಿ ಪಾವತಿ ಮಾಡಬೇಕಾಗುತ್ತದೆ.
ಈ ಮೂಲಕ ಹೊಸ ವರ್ಷದ ಸಂಭ್ರಮದಲ್ಲಿದ್ದ ಗ್ರಾಹಕರಿಗೆ ಎಲ್ ಪಿಜಿ ಬೆಲೆ ಇಳಿಕೆಯಾಗಿರುವುದು ಭರ್ಜರಿ ಸಿಹಿ ಸುದ್ದಿ ಸಿಕ್ಕಿದಂತಾಗಿದೆ.

Continue Reading

LATEST NEWS

ಹೊಸ ವರ್ಷದ ಅಮಲಿನಲ್ಲಿ ಹಾಸ್ಟೆಲ್ ದಾರಿ ಕಾಣದೆ ಕಂಗಾಲಾದ ವಿದ್ಯಾರ್ಥಿಗಳು

Published

on

ಉಡುಪಿ : ಹೊಸ ವರ್ಷಾಚರಣೆ ಸಂಭ್ರಮವನ್ನು ಎಲ್ಲೆಡೆ ಸಂಭ್ರಮದಿಂದ ಸ್ವಾಗತಿಸಲಾಗಿದೆ. ಶಿಕ್ಷಣ ನಗರಿ, ವೈದ್ಯಕೀಯ ಲೋಕದ ಕ್ಷೇತ್ರವೆಂದೇ ಬಣ್ಣಿಸಲಾಗಿರುವ ಮಣಿಪಾಲ ಕಾಲೇಜಿನ ಪರಿಸರದಲ್ಲಿ ಸಂಭ್ರಮ ಕಂಡು ಬಂದಿದೆ.

ಬಾರ್‌ ಪಬ್‌ಗಳು ತುಂಬಿ ತುಳುಕಿದ್ದು, ಎಲ್ಲೆಡೆ ಯುವ ಸಮೂಹ ಕಂಠ ಪೂರ್ತಿ ಕುಡಿದು ತೂರಾಡಿದ ಘಟನೆಗಳು ಕೂಡಾ ಕಂಡು ಬಂದಿದೆ. ಇನ್ನು ನಶೆಯಲ್ಲಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದಾರಿಯನ್ನು ಪೊಲೀಸರೇ ತೋರಿಸಬೇಕಾಯಿತು.

 

ಇದನ್ನೂ ಓದಿ : 2025 ರ ಜಗತ್ತಿನ ಭವಿಷ್ಯದ ಬಗ್ಗೆ ಕಾಲಜ್ಞಾನಿಗಳು ಹೇಳಿದ್ದೇನು ?

 

ಮಣಿಪಾಲ ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಬೀಟ್ ನಡೆದಿದೆ. ಲಾಠಿಗಳನ್ನು ಹಿಡಿದು ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ ಪೊಲೀಸರು ದಿನವಿಡಿ ಜಾಗರಣ ಕುಳಿತು ಯಾವುದೇ ಅನಾಹುತಗಳಾಗದಂತೆ ಎಚ್ಚರಿಕೆ ವಹಿಸಿದರು. ಕಾಯಿನ್ ಸರ್ಕಲ್, ಸಿಂಡಿಕೇಟ್ ಸರ್ಕಲ್ ನಲ್ಲಿ ನಾಕಾಬಂದಿ ಏರ್ಪಡಿಸಲಾಗಿತ್ತು. ಬೈಕ್‌ ವ್ಹೀಲಿಂಗ್‌ ಗಳಿಗೆ ಪೊಲೀಸರು ಸಂಪೂರ್ಣ ಬ್ರೇಕ್‌ ಹಾಕಿದ್ದು, ಯಾವುದೇ ದುರಂತಗಳಿಗೆ ಆಸ್ಪದ ನೀಡಲಿಲ್ಲ. ಮದ್ಯಪಾನ ಮಾಡಿ ವಾಹನ ಚಲಾಯಿಸಿದವರ ವಿರುದ್ಧವೂ ಪೊಲೀಸರು ಪ್ರಕರಣ ದಾಖಲಿಸುತ್ತಿರುವುದು ಕಂಡು ಬಂತು.

Continue Reading

LATEST NEWS

ಕಿರಿಬತಿ ದ್ವೀಪ ರಾಷ್ಟ್ರದಿಂದ ಹೊಸ ವರ್ಷ ಆರಂಭ

Published

on

ಮಂಗಳೂರು: ಹೊಸ ವರ್ಷವನ್ನು ಎಲ್ಲಾ ದೇಶಗಳು ಸಂಭ್ರಮದಿಂದ ಬರಮಾಡಿಕೊಂಡಿದೆ. ಅದೇ ರೀತಿ ಭಾರತದಲ್ಲೂ 2025ನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಫೆಸಿಫಿಕ್ ಸಾಗರದ ಕಿರಿಬತಿ (Kiribati) ಎಂಬ ದ್ವೀಪ ರಾಷ್ಟ್ರ 2025ರ ಹೊಸ ವರ್ಷವನ್ನು ಮೊದಲು ಸ್ವಾಗತಿಸಲಾಯಿತು. ನಂತರ ಅದರ ಸನಿಹದ ನ್ಯೂಜಿಲ್ಯಾಂಡ್ ಹೊಸ ವರ್ಷವನ್ನು ಸ್ವಾಗತಿಸಿದವು.

ಆ ನಂತರ ಆಸ್ಟ್ರೇಲಿಯಾ, ಜಪಾನ್ ಹಾಗೂ ದಕ್ಷಿಣ ಕೊರಿಯಾ ಹೊಸ ವರ್ಷ ಸ್ವಾಗತಿಸಿದವು. ಆಸ್ಟ್ರೇಲಿಯಾ ನಗರದ ಸಿಡ್ನಿಯ ಒಪೆರಾ ಹೌಸ್ ಬಳಿ ಚಿತ್ತಾಕರ್ಷಕ ಬಾಣ ಬಿರುಸುಗಳನ್ನು ಸಿಡಿಸಿ ಸ್ವಾಗತ ಮಾಡಲಾಯಿತು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು.

ಇದನ್ನೂ ಓದಿ: ನ್ಯೂ ಇಯರ್‌ ಪಾರ್ಟಿಗೆ ಗೋವಾಗೆ ತೆರಳುತ್ತಿದ್ದಾಗ ಅಪಘಾತ – 10 ಮಂದಿಗೆ ಗಾಯ

ನಂತರ ರಷ್ಯಾದಲ್ಲಿ 2025ಕ್ಕೆ ಸ್ವಾಗತಿಸಲಾಯಿತು. ರಾತ್ರಿಯಿಡಿ ಸಂಭ್ರಮಾಚರಣೆಗಳಲ್ಲಿ ಭಾಗಿಯಾಗಿದ್ದಾರೆ. ಇತ್ತ ಥೈಲ್ಯಾಂಡ್ ನಲ್ಲಿ ಕೊನೆಯ ಸೂರ್ಯಾಸ್ತಕ್ಕೆ ವಿದಾಯ ಹೇಳಿ ಹೊಸ ವರ್ಷವನ್ನು ಸ್ವಾಗತಿಸಿದರು.

ಭಾರತದಲ್ಲೂ ಹೊಸ ವರ್ಷಾಚರಣೆ ಸಂಭ್ರಮ ಮುಗಿಲು ಮುಟ್ಟಿದ್ದು ವರ್ಷದ ಕೊನೆ ದಿನದಂದು ಪ್ರವಾಸಿ ತಾಣಗಳು, ಹೋಟೆಲ್, ರೆಸಾರ್ಟ್, ರೆಸ್ಟೊರೆಂಟ್ ಗಳು ತುಂಬಿ ತುಳುಕುತ್ತಿದ್ದವು.

Continue Reading

LATEST NEWS

Trending

Exit mobile version