ಉಡುಪಿ: ಉಡುಪಿ ಜಿಲ್ಲೆಯಲ್ಲಿ ಡೆಡ್ಲಿ ಕೊರೊನಾ ಸೋಂಕಿಗೆ ಮತ್ತೊಂದು ಬಲಿಯಾಗಿದೆ. ಮಹಾರಾಷ್ಟ್ರದಿಂದ ಆಗಮಿಸಿದ್ದ 48 ವರ್ಷದ ವ್ಯಕ್ತಿ ಕೋವಿಡ್ ಸೋಂಕಿಗೆ ಬಲಿಯಾಗಿದ್ದು, ಜಿಲ್ಲೆಯಲ್ಲಿ ಸೋಂಕಿತರ ಸಾವಿನ ಸಂಖ್ಯೆ ಮೂರಕ್ಕೆ ಏರಿದೆ.
ಇನ್ನು ಉಡುಪಿ ಜಿಲ್ಲೆಯಲ್ಲಿಂದು ಒಂಬತ್ತು ಜನರಿಗೆ ಕೊರೊನಾ ವೈರಸ್ ಸೋಂಕು ತಾಗಿರುವುದು ಪತ್ತೆಯಾಗಿದೆ. ಇದರಿಂದ ಜಿಲ್ಲೆಯ ಒಟ್ಟು ಕೋವಿಡ್ ಸೋಂಕಿತರ ಸಂಖ್ಯೆ 1206ಕ್ಕೆ ಏರಿಕೆಯಾಗಿದೆ.
ಇಂದು ಒಂಬತ್ತು ಮಂದಿ ಸೋಂಕಿತರ ಪೈಕಿ ಆರು ಮಂದಿ ಪುರುಷರು ಮತ್ತು ಮೂವರು ಮಹಿಳೆಯರಾಗಿದ್ದಾರೆ.
ಮೂವರು ಮಹಾರಾಷ್ಟ್ರದಿಂದ ಬಂದಿದ್ದರೆ, ಓರ್ವ ಹೈದರಾಬಾದ್ ನಿಂದ ಆಗಮಿಸಿದ್ದರು. ಇಬ್ಬರು ಕೋವಿಡ್ ಸೋಂಕಿತರ ಸಂಪರ್ಕದಿಂದ ಸೋಂಕು ತಾಗಿದೆ.
ಓರ್ವ ಬಟ್ಟೆಯಂಗಡಿ ಮಾಲೀಕನಿಗೆ ಸೋಂಕು ದೃಢವಾಗಿದ್ದರೆ, ಇಬ್ಬರು ಕುಂದಾಪುರ- ಬೆಂಗಳೂರು ಬಸ್ ಚಾಲಕರಿಗೆ ಕೋವಿಡ್ ಸೋಂಕು ಪತ್ತೆಯಾಗಿದೆ.
ಒಟ್ಟು 1206 ಕೋವಿಡ್ ಸೋಂಕಿತರಲ್ಲಿ 1067 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಮೂವರು ಸೋಂಕಿತರು ಮೃತಪಟ್ಟರೆ, ಇನ್ನೂ 136 ಸಕ್ರಿಯ ಪ್ರಕರಣಗಳಿವೆ. ಇವರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಂದು (ಜೂನ್ 30) ಮುಂಬೈನಿಂದ ಆಗಮಿಸಿದ್ದ 48 ವರ್ಷದ ವ್ಯಕ್ತಿ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದರು.
ಮುಂಬೈನಲ್ಲಿ ಚಿಕಿತ್ಸೆ ಪಡೆದು ಬಂದಿದ್ದರೂ ಆ ವಿಷಯವನ್ನು ಇಲ್ಲಿ ಅಧಿಕಾರಿಗಳ ಮುಂದೆ ಮರೆ ಮಾಚಿದ್ದರು.
ಸದ್ಯ ವ್ಯಕ್ತಿ ಮೃತಪಟ್ಟಿದ್ದು, ನಂತರ ಪರೀಕ್ಷೆ ನಡೆಸಿದಾಗ ಕೋವಿಡ್ ಇರುವ ಬಗ್ಗೆ ಖಚಿತವಾಗಿದೆ.
ಮಂಗಳೂರು/ ತಿರುವನಂತಪುರಂ : ಇದು ಸೋಶಿಯಲ್ ಮೀಡಿಯಾ ಯುಗ…ಫೋಟೋ, ವೀಡಿಯೋಗಳದ್ದೇ ರಾಯಭಾರ. ರೀಲ್ಸ್ ಬಗ್ಗೆ ಅಂತೂ ಹೇಳೋದೇ ಬೇಡ. ಬಹಳಷ್ಟು ಜನ ರೀಲ್ಸ್ ಪ್ರಿಯರು. ಇಲ್ಲೊಬ್ಬ ರೀಲ್ಸ್ ಮೂಲಕ ವಿಶ್ವ ದಾಖಲೆ ಬರೆದಿದ್ದಾನೆ.
ಹೌದು, ಈತನ ಮಾಡಿರೋ ಆ ಒಂದು ರೀಲ್ಸ್ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಭಾರೀ ವೀಕ್ಷಣೆ ಗಿಟ್ಟಿಸಿಕೊಂಡು ದಾಖಲೆ ಬರೆದಿದೆ. ಅಂದ್ಹಾಗೆ ಈ ವೀಡಿಯೋ ಮಾಡಿರೋದು ಕೇರಳದ ಫ್ರೀಸ್ಟೈಲ್ ಫುಟ್ಬಾಲ್ ಆಟಗಾರ ಮುಹಮ್ಮದ್ ರಿಜ್ವಾನ್. ಈ ವೀಡಿಯೋ 554 ಮಿಲಿಯನ್ ವೀಕ್ಷಣೆಯನ್ನು ಪಡೆದಿದೆ.
ವೀಡಿಯೋದಲ್ಲಿ ಏನಿದೆ?
ಮಲಪ್ಪುರಂನ ಕೇರಳಂಕುಂಡು ಜಲಪಾತದಲ್ಲಿ ಈ ರೀಲ್ಸ್ ಮಾಡಲಾಗಿದೆ. ರಿಜ್ವಾನ್ ದೂರದಿಂದ ಫುಟ್ಬಾಲ್ ಒದೆಯುತ್ತಾರೆ. ಅದು ಜಲಪಾತದ ಬಂಡೆಗಳ ನಡುವೆ ಧುಮ್ಮಿಕ್ಕುತ್ತಿರೋ ಜಲಪಾತದೊಳಗೆ ಬೀಳುತ್ತದೆ. ಚಕಿತಗೊಂಡ ರಿಜ್ವಾನ್ ತಲೆ ಮೇಲೆ ಕೈ ಇಡುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ.
2023ರ ನವೆಂಬರ್‌ನಲ್ಲಿ ಫುಟ್ಬಾಲ್ ಫ್ರೀ ಕಿಕ್ ವೀಡಿಯೋವನ್ನು ರಿಜ್ವಾನ್ ಹಂಚಿಕೊಂಡಿದ್ದರು. 2024 ಜನವರಿ 8 ರಂದು ಗಿನ್ನಿಸ್ ವಿಶ್ವದಾಖಲೆ ಅಧಿಕೃತವಾಗಿ ಅಂಗೀಕರಿಸಿತು. ಅದೇ ಜಲಪಾತದ ಎದುರು ತಮ್ಮ ಗಿನ್ನಿಸ್ ಪ್ರಮಾಣ ಪತ್ರ ಮತ್ತು ಫುಟ್ಬಾಲ್ ಹಿಡಿದು ಕೃತಜ್ಞತೆ ಸಲ್ಲಿಸುತ್ತಿರುವ ವೀಡಿಯೋವನ್ನೂ ಅವರು ಹಂಚಿಕೊಂಡಿದ್ದಾರೆ.
ಮಂಗಳೂರು/ಬೆಂಗಳೂರು : ‘ಬಿಗ್ ಬಾಸ್ ಕನ್ನಡ ಸೀಸನ್ 11’ರಲ್ಲಿ ಇದೀಗ ಸೆಮಿ ಫಿನಾಲೆ ವಾರ ಮುಕ್ತಾಯವಾಗುತ್ತಾ ಬಂದಿದೆ. ಇಂದು ಕಿಚ್ಚ ಸುದೀಪ್ ವಾರಾಂತ್ಯದ ಪಂಚಾಯ್ತಿ ನಡೆಸಿಕೊಡಲಿದ್ದಾರೆ. ಇದರಲ್ಲಿ ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಿದ್ದಾರೆ. ಇದು ನಾಮಿನೇಟ್ ಆಗಿರುವ ಸ್ಪರ್ಧಿಗಳ ಆಟವನ್ನು ನಿರ್ಧಾರ ಮಾಡಲಿದೆ.
ಇನ್ನೊಂದು ಕಡೆ ಮಧ್ಯವಾರದಲ್ಲಿ ಒಬ್ಬರನ್ನು ಎಲಿಮಿನೇಟ್ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಹಾಗೆ ಮಾಡಿಲ್ಲ. ಈಗ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯೋದು ಪಕ್ಕಾ ಆಗಿದೆ. ಇಂದು (ಜ.18) ಎಲಿಮಿನೇಷನ್ ನಡೆಯಲಿದ್ದು, ಒಬ್ಬರು ಹೊರ ಹೋಗುವುದು ಪಕ್ಕಾ ಎನ್ನಲಾಗಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 11’ ಪೂರ್ಣಗೊಳ್ಳಲು ಇನ್ನು ಒಂದು ವಾರ ಮಾತ್ರ ಬಾಕಿ ಇದೆ. ಮುಂದಿನ ವೀಕೆಂಡ್‌ನಲ್ಲಿ ಫಿನಾಲೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಇರುತ್ತಾರೆ ಹಾಗೂ ಯಾರು ಹೋಗುತ್ತಾರೆ ಎಂದು ಊಹಿಸೋದು ಕೂಡ ಕಷ್ಟ ಎಂಬಂತಾಗಿದೆ. ಹೀಗಿರುವಾಗಲೇ ಶನಿವಾರ ಸ್ಪರ್ಧಿಗಳಿಗೆ ಒಂದು ಶಾಕಿಂಗ್ ವಿಚಾರ ಇರಲಿದೆ ಎಂದು ಹೇಳಲಾಗುತ್ತಿದೆ.
ಕೆಲವು ವರದಿಗಳ ಪ್ರಕಾರ ಇಂದು ಶೋ ಆರಂಭಕ್ಕೂ ಮೊದಲೇ ಅಥವಾ ಶೋ ಕೊನೆಯಲ್ಲಿ ಎಲಿಮಿನೇಷನ್ ನಡೆಯೋ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಭಾನುವಾರ ಕೂಡ ಒಂದು ಎಲಿಮಿನೇಷನ್ ನಡೆಯಲಿದೆ. ಈ ವಾರ ಒಟ್ಟಾರೆ ಇಬ್ಬರು ಅಥವಾ ಮೂವರು ಹೊರ ಹೋಗಲಿದ್ದಾರೆ.
ಸದ್ಯ ಹನುಮಂತ ಅವರು ಎಲಿಮಿನೇಷನ್‌ನಿಂದ ಬಚವ್ ಆಗಿದ್ದಾರೆ. ಮೋಕ್ಷಿತಾ ಪೈ ಅವರನ್ನು ಹನುಮಂತ ಸೇವ್ ಮಾಡಿದ್ದು, ಫಿನಾಲೆ ವಾರ ತಲುಪಿದ್ದಾರೆ. ಇನ್ನು ಡಬಲ್ ಎಲಿಮಿನೇಷನ್ ಇರುವ ಕಾರಣ ನಾಮಿನೇಟ್ ಆಗಿರುವ ಗೌತಮಿ, ರಜತ್, ಮಂಜು, ಭವ್ಯ ಹಾಗೂ ಧನರಾಜ್ ಮೊಗದಲ್ಲಿ ಆತಂಕ ಕಾಡುತ್ತಿದೆ. ನಗು ಎನ್ನುವುದು ಮಾಯವಾಗಿ ಕಣ್ಣೀರು ಬಾಕಿ ಉಳಿದಿದೆ. ಕೊನೆ ಹಂತಕ್ಕೆ ಬಂದು ಹೊರ ನಡೆದರೆ ಹೇಗೆ ಎಂದು ಯೋಚನೆಯಲ್ಲಿ ತೊಡಗಿದ್ದಾರೆ. ಹನುಮಂತು, ಮೋಕ್ಷಿತಾ ಅವರನ್ನು ಉಳಿಸಿಕೊಂಡಿದ್ದು ಧನರಾಜ್‌ಗೆ ಕೈಕೊಟ್ಟಿದ್ದಾರೆ.
ಈ ವಾರ ಯಾರಿಗೆ ಮನೆಯಿಂದ ಗೇಟ್‌ಪಾಸ್ ?
ಉಗ್ರಂ ಮಂಜು, ರಜತ್ ಮತ್ತು ಭವ್ಯಾ ಗೌಡ ಅವರ ಆಟಕ್ಕೆ ಹೋಲಿಕೆ ಮಾಡಿದರೆ ಗೌತಮಿ ಈ ವಾರ ಹೊರ ಹೋಗೋದು ಬಹುತೇಕ ಖಚಿತ. ಅಷ್ಟೇ ಅಲ್ಲದೆ, ಅವರಿಗೆ ಫ್ಯಾನ್ಸ್ ಫಾಲೋವಿಂಗ್ ಕೂಡ ತೀರಾ ಕಡಿಮೆ ಇದೆ. ಇನ್ನು ಇವರನ್ನು ಹೊರತುಪಡಿಸಿ ಧನರಾಜ್ ಅವರು ತಮ್ಮ ಆಟಕ್ಕೆ ಫುಲ್ ಸ್ಟಾಪ್ ಇಡುವ ಸಾಧ್ಯತೆ ಇದೆ.
ಆಟದ ವೈಖರಿ, ಮನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ರೀತಿ ಇವೆಲ್ಲವನ್ನೂ ಗಮನಿಸಿದರೆ ಧನರಾಜ್ ಉತ್ತಮವಾಗಿದ್ದಾರೆ. ಆದರೆ ಈ ವಾರದ ಟಾಸ್ಕ್ ಒಂದರಲ್ಲಿ ನಿಯಮದ ಅರಿವಿಲ್ಲದೆ, ಕನ್ನಡಿ ನೋಡಿಕೊಂಡು ಟಾಸ್ಕ್ ಕಂಪ್ಲೀಟ್ ಮಾಡಿದ್ದರು. ಈ ಒಂದು ತಪ್ಪಿನಿಂದಾಗಿ ಅವರಿಗೆ ಓಟಿಂಗ್ ವ್ಯವಸ್ಥೆಯಲ್ಲಿ ಪೆಟ್ಟು ಬೀಳುವ ಸಾಧ್ಯತೆ ಇದೆ.
ಅಲ್ಲದೆ ನಾಮಿನೇಟ್ ಆದ ಪ್ರತಿ ಸ್ಪರ್ಧಿಗಳಿಗೆ ವಾರದಲ್ಲಿ 5 ದಿನ ಓಟ್ ಮಾಡುವ ಅವಕಾಶವಿರುತ್ತದೆ. ಆದರೆ ಈ ಬಾರಿ ಧನರಾಜ್ ಅವರಿಗೆ 3 ದಿನವಷ್ಟೇ ಅದರ ಅವಕಾಶ ಸಿಗಲಿದೆ. ಹೀಗಾಗಿ ಕಡಿಮೆ ಓಟ್ ಇವರ ಪಾಲಾಗುವ ಸಾಧ್ಯತೆ ಇದೆ. ಹೀಗಾಗಿ ಈ ವಾರ ಗೌತಮಿ ಮತ್ತು ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರ ಹೋಗುವ ಸಾಧ್ಯತೆ ಹೆಚ್ಚಿದೆ.
ಮಂಗಳೂರು/ಮೈಸೂರು : ಗೆಳತಿ ದೂರವಾದಳೆಂದು ಗೆಳೆಯನು ಸೆಲ್ಫಿ ವಿಡಿಯೋ ಮಾಡಿ ತನ್ನ ದುಃಖವನ್ನು ಹಂಚಿಕೊಂಡು ಬಳಿಕ ಆ*ತ್ಮಹ*ತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನ ಮೇಗಳಾಪುರದಲ್ಲಿ ನಡೆದಿದೆ.
ಮೈಸೂರು ತಾಲ್ಲೂಕು ಯಲಚೇನಹಳ್ಳಿ ಗ್ರಾಮದ ನಿವಾಸಿ ವಿನಯ್ ಆ*ತ್ಮಹ*ತ್ಯೆಗೆ ಶರಣಾಗಿರುವ ವ್ಯಕ್ತಿ ಎಂದು ಗುರುತಿಸಲಾಗಿದೆ.
ವಿನಯ್ ಹಾಗೂ ಯುವತಿಯು ಪರಸ್ಪರ ಪ್ರೀತಿಸುತ್ತಿದ್ದರು. ಇಬ್ಬರ ಸುತ್ತಾಟ ಓಡಾಟ ಜೋರಾಗಿತ್ತು. ಆದರೆ, ಹುಡುಗಿ ಕುಟುಂಬದವರು ಬೇರೆ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದರು. ಆದರೂ ಸಹ ಇಬ್ಬರ ಪ್ರೀತಿ, ಪ್ರಣಯ ಮುಂದುವರಿದಿತ್ತು. ಯುವತಿಯ ಮನೆಯವರು ಇವರ ಪ್ರೀತಿಯನ್ನು ಒಪ್ಪಿರಲಿಲ್ಲ. ಅಷ್ಟೇ ಅಲ್ಲದೇ, ಅವಳ ಇಚ್ಛೆಗೆ ವಿರುದ್ದವಾಗಿ ಬೇರೆ ಮದುವೆ ಮಾಡಿಸಿದ್ದರು. ಆದರೂ ಅವರಿಬ್ಬರ ಪ್ರೀತಿ ಮುಂದುವರೆದಿತ್ತು. ಯುವತಿ ಪೋಷಕರು ಈ ಪ್ರೀತಿಗೆ ಅಡ್ಡಿಯಾದರೂ. ಮಗಳು ಬೇರೆ ಹುಡುಗನ ಜೊತೆ ಮದುವೆಯಾದರೆ ಎಲ್ಲಾ ಸರಿಯಾಗುತ್ತೆ ಎಂಬುವುದು ಯುವತಿಯ ಮನೆಯವರ ಅಭಿಪ್ರಾಯವಾಗಿತ್ತು. ಆದರೆ ಆಗಿದ್ದೇ ಬೇರೆ. ಬೇರೆಯವನನ್ನು ಮದುವೆಯಾದರೂ ವಿನಯ್, ಆಕೆಯನ್ನು ಪ್ರೀತಿಸುವುದನ್ನು ಮಾತ್ರ ನಿಲ್ಲಿಸಿಲ್ಲ. ಯುವತಿ ಸಹ ತಾನು ಬೇರೆಯವನನ್ನು ಮದುವೆಯಾದರೂ ವಿನಯ್ ಜೊತೆ ಸಂಪರ್ಕ ಹೊಂದಿದ್ದಳು. ವಿನಯ್‌ನೊಂದಿಗೆ ಯುವತಿಯ ಸುತ್ತಾಟ ಮುಂದುವರೆದಿದ್ದು, ಕೆಲವು ಬಾರಿ ಮನೆ ಬಿಟ್ಟು ವಿನಯ್ ಜೊತೆ ಹೋಗಿದ್ದ ವೇಳೆ ಮನೆಯವರು ಹುಡುಕಿಕೊಂಡು ಬಂದಿದ್ದರು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.
ಜನವರಿ 16 ರಂದು ಈ ವಿಚಾರವಾಗಿ ರಾಜಿ ಪಂಚಾಯತಿಯಾಗಿದ್ದು, ಅದರಿಂದ ವಿನಯ್ ಅವಮಾನಕ್ಕೊಳಗಾಗಿದ್ದ. ಕೊನೆಗೆ ಮಹಿಳೆಯೂ’ನಾನು ನನ್ನ ಪತಿ ಜೊತೆ ಹೋಗುವೆ’ ಎಂದು ಹೇಳಿದ್ದಳು. ಇದರಿಂದ ಅಸಮಧಾನಗೊಂಡ ವಿನಯ್ ಆಕೆಯನ್ನು ಸಂಪರ್ಕಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದ್ರೆ ಪ್ರಯೋಜನವಾಗಿಲ್ಲ. ಇದರಿಂದ ಮನನೊಂದು ತನ್ನ ಸಹೋದರಿಯ ಮನೆಗೆ ಹೋಗಿ ನೇ*ಣಿಗೆ ಶರಣಾಗಿದ್ದಾನೆ. ಈ ಸಾ*ವಿಗೆ ಯುವತಿಯ ಮನೆಯವರೇ ಕಾರಣ ಎಂದು ವಿನಯ್ ಮನೆಯವರ ಆರೋಪ ಮಾಡಿದ್ದಾರೆ. ‘ಅವರಿಬ್ಬರು ಚೆನ್ನಾಗಿಯೇ ಇದ್ದರು, ಅವರ ಮನೆಯವರು ಅವಮಾನ ಮಾಡಿದ್ದಕ್ಕೆ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾನೆ. ಅವರಿಗೆ ತಕ್ಕ ಶಿಕ್ಷೆ ಆಗಬೇಕು’ ಅನ್ನೋದು ವಿನಯ್ ಮನೆಯವರ ಒತ್ತಾಯ. ಈ ಸಂಬಂಧ ಇಲವಾಲ ಪೊಲೀಸ್ ಠಾಣೆಗೆ ವಿನಯ್ ಸಂಬಂಧಿಕರು ದೂರು ನೀಡಿದ್ದಾರೆ.
ಪ್ರೀತಿ ಪರಿಶುದ್ಧವಾಗಿತ್ತು , ಆದರೆ ಕುಟುಂಬಕ್ಕೆ ಅದೇ ಪ್ರೀತಿ ಕಳಂಕವಾಗಿ ಕಂಡಿತ್ತು. ಮನೆಯವರ ಸ್ವಾರ್ಥಕ್ಕೆ ಇಲ್ಲಿ ಒಂದು ಜೀವ ಬ*ಲಿಯಾಗಿದೆ. ಮಗಳು ಮನೆ ಮರ್ಯಾದೆ ಹೌದು ಆದರೆ ಅವಳ ಭಾವನೆಗೂ ಸ್ಪಂದಿಸುವ ಗುಣ ಮನೆಯವರಲ್ಲಿರಬೇಕು. ಅವಳ ಜೀವನ, ಅವಳ ಇಷ್ಟ, ಅವಳ ಆಯ್ಕೆಯಾಗಿರುತ್ತದೆ. ಒಂದು ವೇಳೆ ವಿನಯ್‌ನನ್ನು ಯುವತಿಯ ಮನೆಯವರು ಒಪ್ಪಿದ್ದಲ್ಲಿ ಒಂದು ಜೀವ ಬದುಕುಳಿಯುತ್ತಿತ್ತು. ಇಬ್ಬರೂ ಸುಖವಾಗಿ ಸಂಸಾರ ನಡೆಸುತ್ತಾ ಜೊತೆಯಾಗಿ ಬಾಳಬಹುದಿತ್ತು. ಆದರೆ, ಎಲ್ಲವೂ ಕೈ ಮೀರಿಯಾಗಿತ್ತು. ಏನೇ ಇರಲಿ, ಮದುವೆಯ ನಂತರವೂ ಪ್ರೀತಿಯ ಹುಚ್ಚಾಟಕ್ಕೆ ಬಿದ್ದು ವಿನಯ್ ಪ್ರಾ*ಣ ಕಳೆದುಕೊಂಡದ್ದು ಮಾತ್ರ ದುರಂತವೇ ಸರಿ.