Connect with us

    ಈ ದಕ್ಷ ಅಧಿಕಾರಿ 20 ವರ್ಷಗಳಲ್ಲಿ 28 ಬಾರಿ ವರ್ಗಾವಣೆ…!

    Published

    on

    ಈ ದಕ್ಷ ಅಧಿಕಾರಿ 20 ವರ್ಷಗಳಲ್ಲಿ 28 ಬಾರಿ ವರ್ಗಾವಣೆ…!

    ಬೆಂಗಳೂರು, ಜನವರಿ 20: ಹರ್ಷ ಗುಪ್ತ ಈ ಹೆಸರು ರಾಜ್ಯದ ಆಳುವ ವರ್ಗ ಸೇರಿದಂತೆ ಬಹುತೇಕರಿಗೆ ಚಿರಪರಿಚಿತ. ನೇರ, ನಿಷ್ಠುರ ಅಧಿಕಾರಿಯೆಂದೇ ಗುರುತಿಸಿಕೊಂಡಿರುವ ಇವರು ಭ್ರಷ್ಟರಿಗೆ, ಆಲಸಿಗಳಿಗೆ ಸಿಂಹಸ್ವಪ್ನ ಎಂದೇ ಹೇಳಬಹುದಾಗಿದೆ.

    ಆದರೆ ದುರಾದೃಷ್ಟ ಎಂದರೆ ಈ ದಕ್ಷ ಪ್ರಮಾಣಿಕ ಅಧಿಕಾರಿಗೆ ಸರ್ಕಾರಗಳು ನೀಡುವ ಗಿಫ್ಟ್ ವರ್ಗಾವಣೆಯದ್ದು, ಕಳೆದ 20 ವರ್ಷಗಳ ಸುಧೀರ್ಘ ಸೇವೆಯಲ್ಲಿ ಬರೋಬ್ಬರಿ 28 ಬಾರಿ ವರ್ಗಾವಣೆಗೊಂಡಿದ್ದಾರೆ.

    ಇದೀಗ ಅಧಿಕಾರ ವಹಿಸಿಕೊಂಡ ನಾಲ್ಕೇ ತಿಂಗಳಲ್ಲಿ ಮರು ವರ್ಗಾವಣೆಗೊಂಡಿದ್ದಾರೆ.

    ಬೆಂಗಳೂರು ಪ್ರಾದೇಶಿಕ ಆಯುಕ್ತರಾಗಿ ವರ್ಗಾವಣೆಗೊಂಡು ನಾಲ್ಕೂವರೆ ತಿಂಗಳಷ್ಟೆ ಆಗಿತ್ತು. ಐಎಂಎ ಪ್ರಕರಣದ ತನಿಖೆಗೆ ವಿಶೇಷ ಅಧಿಕಾರಿ ಎನ್ನುವ ‌ಹೊಸ ಹುದ್ದೆಯಾಗಿ ಸರ್ಕಾರ ಸೃಷ್ಟಿಸಿದೆ.

    ಕಚೇರಿ, ಸಿಬ್ಬಂದಿಯೂ ಇಲ್ಲದ ಈ ಹುದ್ದೆಗೆ ಹರ್ಷರಮತಹ ಹಿರಿಯ ಅಧಿಕಾರಿಯನ್ನು ನೇಮಕ ಮಾಡಿದ್ದು ರಾಜ್ಯದಲ್ಲಿ ಹೊಸ ವಿವಾದದೊಂದಿಗೆ ಚರ್ಚೆಯನ್ನು ಹುಟ್ಟುಹಾಕಿದೆ.

    ಯಾಕೆಂದರೆ ಈಗಾಗಲೇ ಐಎಂಎ ಪ್ರಕರಣವನ್ನು ಸರ್ಕಾರ ಸಿಬಿಐಗೆ ವಹಿಸಿದೆ. ಪ್ರಕರಣ ಸಿಬಿಐಗೆ ವಹಿಸಿದ್ದರಿಂದ ಈ ರೀತಿ ಪ್ರತ್ಯೇಕ ಅಧಿಕಾರಿ ನೇಮಕ ಸರಿಯಲ್ಲವೆನ್ನುವುದು ತಜ್ಞರ ಅಭಿಮತವಾಗಿದೆ. ಈ ಹುದ್ದೆಗೆ ಹಿರಿಯ ‌‌ಅಧಿಕಾರಿಯನ್ನು ವರ್ಗಾವಣೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

    ಐಎಂಎಗೆ ಸೇರಿದ ಸ್ಥಿರ ಮತ್ತು ಚರಾಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು, ಬಳಿಕ ಕೋರ್ಟ್‌ ಸೂಚನೆ ಅನ್ವಯ‌ ಹರಾಜು ಹಾಕಿ ಸಂತ್ರಸ್ತರಿಗೆ ಹಣ ಹಂಚಿಕೆ ಮಾಡಲು ಪ್ರತ್ಯೇಕ ಹುದ್ದೆಯೊಂದನ್ನು ಸೃಜಿಸಿ ಮತ್ತು ಅದಕ್ಕೆ ಐಎಎಸ್‌ ಅಧಿಕಾರಿಯನ್ನು ನೇಮಿಸುವ ಅಗತ್ಯ ಇತ್ತೇ ಎಂಬ ಪ್ರಶ್ನೆ ರಾಜ್ಯದ ಹಿರಿಯ ಅಧಿಕಾರಿಗಳ ವಲಯದಲ್ಲಿ ಮೂಡಿದೆ.

    ಆದರೂ ತನ್ನ ಕರ್ತವ್ಯ ನಿಷ್ಟೆಯಿಂದ ಹಿಂದೆ ಸರಿಯದ ಹರ್ಷ ಅವರು ಈ ಹೊಸ ಹುದ್ದೆ ವಹಿಸಿಕೊಂಡ ದಿನವೇ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಅವರು ವಿವರವಾದ ‍ಪತ್ರ ಬರೆದಿದ್ದಾರೆ.

    ‘ಹೆಚ್ಚುವರಿ ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ ಸೇರಿದಂತೆ ಅಗತ್ಯ ಸಿಬ್ಬಂದಿ, ಪ್ರತ್ಯೇಕ ಕಚೇರಿ, ವಾಹನವನ್ನು ತಕ್ಷಣವೇ ಒದಗಿಸಬೇಕು’ ಎಂದು ಮನವಿ ಮಾಡಿದ್ದಾರೆ.

    ಐಎಂಎ ಆಸ್ತಿ ಜಪ್ತಿ ಕುರಿತಂತೆ ನಾಲ್ಕು ವರದಿಗಳನ್ನು ಹೈಕೋರ್ಟ್‌ಗೆ ಹರ್ಷ ಗು‍ಪ್ತ ಅವರು ಈಗಾಗಲೇ ಸಲ್ಲಿಸಿದ್ದಾರೆ.

    ಬೆಂಗಳೂರು ಪ್ರಾದೇಶಿಕ ಆಯುಕ್ತ ಹುದ್ದೆಯಲ್ಲಿದ್ದಾಗ ಕೋಟ್ಯಂತರ ಮೌಲ್ಯದ ಸರ್ಕಾರಿ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳಿಗೆ ಹಂಚಿಕೆ ಮಾಡಿದ ಆರೋಪದಲ್ಲಿ ತಹಶೀಲ್ದಾರ್‌ ಹಾಗೂ ಭೂ ದಾಖಲೆಗಳ ಉಪನಿರ್ದೇಶಕರ (ಡಿಡಿಎಲ್‌ಆರ್‌) ಮೇಲೆ ಕಠಿಣ ಕ್ರಮ ತೆಗೆದುಕೊಂಡಿದ್ದರು.

    ಬಿಬಿಎಂಪಿ ಮೇಯರ್ ಮತ್ತು ಉಪಮೇಯರ್ ಚುನಾವಣೆ ಮುಂದೂಡಲು ಬಿಜೆಪಿ ಸರ್ಕಾರ ಮಾಡಿದ ಪ್ರಯತ್ನವನ್ನೂ ಅವರು ವಿಫಲಗೊಳಿಸಿದ್ದರು.

    1997ನೇ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಹರ್ಷ ಗುಪ್ತ, 1999ರ ಆ. 1ರಂದು ಉಪವಿಭಾಗಾಧಿಕಾರಿಯಾಗಿ ಸರ್ಕಾರಿ ಕರ್ತವ್ಯಕ್ಕೆ ಸೇರಿದ್ದಾರೆ.

    2003ರಲ್ಲಿ ಬಳ್ಳಾರಿ ಸಿಇಒ ಆಗಿದ್ದ ಅವರು ಚಾಮರಾಜನಗರ, ಚಿಕ್ಕಮಗಳೂರು, ಬೀದರ್‌, ಬಳ್ಳಾರಿ, ಶಿವಮೊಗ್ಗ, ಮೈಸೂರು, ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಎಲ್ಲ ಹುದ್ದೆಗಳಲ್ಲಿ ಕರ್ತವ್ಯ ನಿಭಾಯಿಸಿದ ಸರಾಸರಿ ಅವಧಿ 10 ತಿಂಗಳಿಗೂ ಕಡಿಮೆಯದ್ದಾಗಿದೆ.

    Click to comment

    Leave a Reply

    Your email address will not be published. Required fields are marked *

    bangalore

    ಆನ್ ಲೈನ್ ಗೇಮಿಂಗ್ ಹುಚ್ಚಿಗೆ ಬ*ಲಿಯಾದ ಯುವಕ !

    Published

    on

    ಮಂಗಳೂರು/ಬೆಂಗಳೂರು: ಆನ್ ಲೈನ್ ಗೇಮಿಂಗ್ ಹುಚ್ಚು ಜಾಸ್ತಿಯಾಗುತ್ತಿದೆ. ಶಾಲಾ ಕಾಲೇಜು ವಿದ್ಯಾರ್ಥಿಗಳು, ಉದ್ಯಮಿಗಳು, ಗೃಹಿಣಿಯರು, ಸೆಲೆಬ್ರಿಟಿಗಳು ಹೀಗೆ ಎಷ್ಟೋ ಮಂದಿ ಹಣದೊಂದಿಗೆ ಜೀವವನ್ನು ಕಳೆದುಕೊಂಡ ಹಲವು ಕೇಸುಗಳು ಬೆಳಕಿಗೆ ಬಂದಿದೆ.

    ಇತ್ತೀಚೆಗೆ ನಿರ್ದೇಶಕ ಗುರುಪ್ರಸಾದ್ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾದರು ಎಂದು ವರದಿಯಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಪ್ರಕರಣ ಬೆಂಗಳೂರಿನ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

    ಆನ್ ಲೈನ್ ಗೇಮಿಂಗ್ ನಿಂದ ಎಚ್ಚೆತ್ತುಕೊಳ್ಳುವುದಕ್ಕೂ ಮುನ್ನವೇ ವಂಚನೆಗೆ ಬಲಿ*ಯಾಗುವವರ ಸಂಖ್ಯೆ ಜಾಸ್ತಿಯಾಗುತ್ತಲೇ ಇದೆ.

    ಇದನ್ನೂ ಓದಿ: ಹತ್ತು ನಿಮಿಷದಲ್ಲಿ 2.63 ಕೋಟಿಗೆ ಬ್ರಾಡ್ಮನ್ ಕ್ಯಾಪ್ ಹರಾಜು !

    ಈಗ ಇಂಥದೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಪ್ರವೀಣ್ ಎಂಬ 19 ವರ್ಷದ ಯುವಕ ಆನ್ ಲೈನ್ ಗೇಮಿಂಗ್ ಗೆ ಬಲಿ*ಯಾಗಿದ್ದಾನೆ. ಕಳೆದ ಹತ್ತು ದಿನಗಳ ಹಿಂದೆ ನಡೆದ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

    ಪ್ರವೀಣ್ ಕೆ.ಆರ್ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲೇ ವಾಸ ಇದ್ದ. ಕಾಲೇಜಿಗೆ ಹೋಗೋದು ಬಿಟ್ಟು ಯಾವಾಗಲೂ ಗೇಮ್ ಆಡುತ್ತಿದ್ದ. ಆನ್ ಲೈನ್ ಗೇಮ್ ಆಡಲು ಬಹಳ ಸಾಲ ಮಾಡಿಕೊಂಡಿದ್ದ. ಗೆದ್ರೂ ಆ ಹಣವನ್ನು ಸಾಲಗಾರರೇ ತೆಗೆದುಕೊಳ್ಳುತ್ತಿದ್ರು. ಹೀಗಾಗಿ ಸಾಲಗಾರರ ಕಾಟವೂ ಹೆಚ್ಚಾಗಿತ್ತು. ಇದರಿಂದ ಬೇಸತ್ತ ಪ್ರವೀಣ್ ಮನೆಯಲ್ಲೇ ನೇಣಿಗೆ ಶರಣಾಗಿದ್ದಾನೆ. ಈ ಕುರಿತು ಕೆ.ಆರ್ ಪುರಂ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದಾರೆ.

    ಆನ್ ಲೈನ್ ಗೇಮ್ ಭೂತ ಹೊಕ್ಕು ಆತನ ಜೀವವನ್ನೆ ಕಿತ್ತುಕೊಂಡಿದೆ. ಆನ್ ಲೈನ್ ಮೂಲಕ ಆಟವಾಡಿ ಹಣವನ್ನು ಕಳೆದುಕೊಂಡು ನಂತರ ಸಾಲ ಮಾಡುತ್ತಾರೆ. ಸಾಲಗಾರರ ಕಾಟ ತಡೆಯಲಾಗದೇ ಆತ್ಮಹತ್ಯೆಗೆ ಬ*ಲಿಯಾಗುತ್ತಿದ್ದಾರೆ.

    Continue Reading

    LATEST NEWS

    ಪುತ್ರಿ ಸಾರಾಗೆ ಹೊಸ ಜವಾಬ್ದಾರಿ ವಹಿಸಿದ ಸಚಿನ್ ತೆಂಡೂಲ್ಕರ್

    Published

    on

    ಮಂಗಳೂರು/ ಮುಂಬೈ : ಸಚಿನ್ ತೆಂಡೂಲ್ಕರ್ ತಮ್ಮ ಪುತ್ರಿ ಸಾರಾ ತೆಂಡೂಲ್ಕರ್‌ ಹೆಗಲಿಗೆ ಹೊಸ ಜವಾಬ್ದಾರಿ ಹೊರಿಸಿದ್ದಾರೆ. ಸಚಿನ್ ತೆಂಡೂಲ್ಕರ್ ಫೌಂಡೇಷನ್(ಎಸ್‌ಟಿಎಫ್) ನಿರ್ದೇಶಕಿಯಾಗಿ ಸಾರಾ ತೆಂಡೂಲ್ಕರನ್ನು ನೇಮಕ ಮಾಡಿದ್ದಾರೆ.

    ಈ ಕುರಿತು ಸಚಿನ್ ತೆಂಡೂಲ್ಕರ್ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಸಾರಾ ಯೂನಿವರ್ಸಿಟಿ ಕಾಲೇಜು ಲಂಡನ್‌ನಲ್ಲಿ ಕ್ಲಿನಿಕಲ್ ಮತ್ತು ಪಬ್ಲಿಕ್ ಹೆಲ್ತ್ ನ್ಯೂಟ್ರಿಷನ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ.  ಕ್ರೀಡೆ, ಆರೋಗ್ಯ ಮತ್ತ ಶಿಕ್ಷಣ ಕ್ಷೇತ್ರದ ಮೂಲಕ ಭಾರತವನ್ನು ಸಶಕ್ತಗೊಳಿಸಲು ಆಕೆ ಪ್ರಯಾಣವನ್ನು ಪ್ರಾರಂಭಿಸಿದಾಗ ಜಾಗತಿಕ ಕಲಿಕೆಯು ಹೇಗೆ ಪರಿಪೂರ್ಣತೆಗೆ ತಲುಪಿದೆ ಎಂಬುದನ್ನು ನೆನಪಿಸುತ್ತದೆ ಎಂದು ಬರೆದಿದ್ದಾರೆ.

    ಇದನ್ನೂ ಓದಿ : WATCH VIDEO : ಬೆಂಕಿ ಉಂಡೆಯಾಗಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹ

    2019ರಲ್ಲಿ ಸಚಿನ್ ತೆಂಡೂಲ್ಕರ್ ಫೌಂಡೇಷನ್ ಅನ್ನು ಸ್ಥಾಪಿಸಲಾಗಿತ್ತು.

     

     

     

    Continue Reading

    LATEST NEWS

    WATCH VIDEO : ಬೆಂಕಿ ಉಂಡೆಯಾಗಿ ಭೂಮಿಗೆ ಅಪ್ಪಳಿಸಿದ ಕ್ಷುದ್ರಗ್ರಹ

    Published

    on

    ಮಂಗಳೂರು/ರಷ್ಯಾ : ಆಗೊಮ್ಮೆ ಈಗೊಮ್ಮೆ ಕ್ಷುದ್ರಗ್ರಹಗಳು ಭೂಮಿಗೆ ಅಪ್ಪಳಿಸುವ ಘಟನೆಗಳು ನಡೆಯುತ್ತಿರುತ್ತವೆ. 2024 ರಲ್ಲಿ ಈಗಾಗಲೇ ಮೂರು ಕ್ಷುದ್ರಗ್ರಹಗಳು ಈ ರೀತಿ ಭೂಮಿಗೆ ಬಂದು ಅಪ್ಪಳಿಸಿವೆ.  ಇದೀಗ ರಷ್ಯಾದ ಅರಣ್ಯ ಪ್ರದೇಶಕ್ಕೆ ಕ್ಷುದ್ರಗ್ರಹ COWEPC5, ಕೇವಲ 70 ಸೆಂ ವ್ಯಾಸದಲ್ಲಿ, ರಷ್ಯಾದ ಯತ್ಸ್ಯ ಎಂಬ ಪ್ರದೇಶದ ಮೇಲೆ ಬಿದ್ದಿದೆ. ಈ ದೃಶ್ಯ ಕ್ಯಾಮರಾ ಕಣ್ಣಿನಲ್ಲಿ ಸೆರೆಯಾಗಿದೆ.

    ಯಾಕುಟಿಯಾದ ಆಕಾಶದಲ್ಲಿ ಕ್ಷುದ್ರಗ್ರಹವು ಬೃಹತ್ ಬೆಂಕಿಯ ಉಂಡೆಯಂತೆ ಕಾಣಿಸಿಕೊಂಡಿತು. ಇದು ಭೂಮಿಗೆ ಅಪ್ಪಳಿಸುವ ಕೇವಲ ಹನ್ನೆರಡು ಘಂಟೆಗಳ ಮೊದಲು ವಿಜ್ಞಾನಿಗಳು ಇದರ ದಿಕ್ಕು ಬದಲಾಯಿಸಿದ್ದಾರೆ. ಹೀಗಾಗಿ ಇದು ರಷ್ಯಾದ ಯತ್ಸ್ಯ ಎಂಬ ಪ್ರದೇಶದಲ್ಲಿನ ಅರಣ್ಯ ಪ್ರದೇಶಕ್ಕೆ ಬಿದ್ದಿದೆ.

    ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣಕ್ಕೆ ಮತ್ತೆ ಬಾಂಬ್ ಬೆದರಿಕೆ !!

    ಬೆಂ*ಕಿ ಉಂಡೆಯಂತೆ ವೇಗವಾಗಿ ಬಂದ ಈ ಕ್ಷುದ್ರಗ್ರಹ ಬೇರೆ ಬೇರೆ ಕಡೆಗಳಲ್ಲಿ ಕ್ಯಾಮರಾ ಕಣ್ಣಿನಲ್ಲಿ ಕಾಣಿಸಿಕೊಂಡಿದೆ. ನಿನ್ನೆ ಅಪ್ಪಳಿಸಿದ ಕ್ಷುದ್ರಗ್ರಹವು ಈ ಹಿಂದೆ ಪತ್ತೆಯಾದ 2022 WJ, 2023 CX1 ಮತ್ತು 2024 BX1 ಅನ್ನು ಹೋಲುತ್ತದೆ ಎಂದು ಸಂಶೋಧಕರು ಸ್ಪಷ್ಟಪಡಿಸಿದ್ದಾರೆ . ಇವೆಲ್ಲವೂ ವಾತಾವರಣಕ್ಕೆ ಪ್ರವೇಶಿಸಿದ ತಕ್ಷಣ ದೊಡ್ಡ ಬೆಳಕನ್ನು ಉತ್ಪಾದಿಸುತ್ತವೆ. ನಾಸಾ ಮತ್ತು ಯೂರೋಪಿಯನ್ ಬಾಹ್ಯಾಕಾಶ ಸಂಸ್ಥೆಯು ಈ ಕ್ಷುದ್ರಗ್ರಹವನ್ನು ಗುರುತಿಸಿ ಅದರ ಪಥ ಬದಲಾಯಿಸಿ ಬಹುದೊಡ್ಡ ಅಪಾಯವನ್ನು ತಪ್ಪಿಸಿದೆ.

     

    Continue Reading

    LATEST NEWS

    Trending