ಶಿಥಿಲಗೊಂಡ ಕೆಪಿಟಿ ಕಟ್ಟಡ ದುರಸ್ಥಿಗೆ ಆಗ್ರಹಿಸಿ ಬೀದಿಳಿದ ಎಬಿವಿಪಿ
ಮಂಗಳೂರು : ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಕೆ.ಪಿ.ಟಿ. ಘಟಕದ ವತಿಯಿಂದ ಕೆ.ಪಿ.ಟಿ ಡಿಪ್ಲೋಮ ಕಾಲೇಜಿನ ಸಮಸ್ಯೆಯನ್ನು ಸರಿಪಡಿಸುವ ಕುರಿತು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಸೇರಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭ ಸರ್ವ ಕಾಲೇಜಿನ ಎಬಿವಿಪಿ ಅಧ್ಯಕ್ಷ ವಚನ್ ಕುಮಾರ್ ಮಾತನಾಡಿ, ಅನೇಕ ಬಾರಿ ಕೆ.ಪಿ.ಟಿ ಕಾಲೇಜಿನ ಪಾಲಿಮರ್, ಕೆಮಿಕಲ್ ಮತ್ತು ಎಲೆಕ್ಟ್ರಾನಿಕ್ ವಿಭಾಗದ ಕಟ್ಟಡವು ಶಿಥಿಲಗೊಂಡಿದ್ದು ಅವ್ಯವಸ್ಥೆಯನ್ನು ಸರಿಪಡಿಸಬೇಕೆಂದು ಕಾಲೇಜಿನ ಪ್ರಾಂಶುಪಾಲರನ್ನು 3 ಭಾರೀ ಮನವಿ ಮಾಡಿದ್ದು, ಇದುವರೆಗೆ ಯಾವುದೇ ರೀತಿಯ ಪ್ರತಿಕ್ರಿಯೆ ದೊರೆತಿಲ್ಲ. 1975 ರಲ್ಲಿ ನಿರ್ಮಾಣವಾದ ಈ ಕಟ್ಟಡದ ಪರಿಸ್ಥಿತಿ ತುಂಬಾನೇ ಹದಗೆಟ್ಟಿದೆ. ಅಲ್ಲದೇ ವಿದ್ಯಾರ್ಥಿಗಳು ಭಯಭೀಯರಾಗಿ ಕುಳಿತುಕೊಂಡು ಪಾಠ ಕೇಳುವ ಪರಿಸ್ಥಿತಿ ಬಂದಿದೆ ಎಂದರು.
ಇನ್ನು ಮಂಗಳೂರು ನಗರ ಕಾರ್ಯದರ್ಶಿ ಮಣಿಕಂಠ ಕಲಸ ಮಾತನಾಡಿ, ಈ ಕಾಲೇಜಿನಲ್ಲಿ ಕಟ್ಟಡ ಸಮಸ್ಯೆ, ಉಪನ್ಯಾಸಕರ ಕೊರತೆ ಸೇರಿದಂತೆ ಅನೇಕ ರೀತಿಯ ತೊಂದರೆಗಳಿವೆ.
ಇದಕ್ಕೆಲ್ಲಾ ಸೂಕ್ತ ರೀತಿಯ ಪರಿಹಾರವನ್ನು ಶಿಕ್ಷಣ ಇಲಾಖೆ ನೀಡಬೇಕು ಎಂದರು. ಈ ವೇಳೆ ಪ್ರತಿಭಟನೆಯಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಮಂಗಳೂರು: ಉಳಾಯಿಬೆಟ್ಟು ಗ್ರಾಮದ, ಕುಟಿನ್ಹ ಪದವು, ಫೆರ್ಮಾಯ್ ಚರ್ಚ್ ಬಳಿಯ ನಿವಾಸಿ ಮನೋಹರ್ ಪಿರೇರಾ (47 ವರ್ಷ) ರವರು ಡಿಸೆಂಬರ್ 17 ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ ಕಾರಣ ಎಂದು ಹೇಳಿ ತಮ್ಮ ಕೊನೆಯ ವಾಟ್ಸಾಪ್ ವಿಡಿಯೋ ಮಾಡಿ ಹಲವು ವಾಟ್ಸಪ್ಪ್ ಗ್ರೂಪ್ ಗಳಲ್ಲಿ ಹಂಚಿ ಆತ್ಮಹತ್ಯೆಮಾಡಿ ಕೊಂಡಿದ್ದರು.
ತನ್ನ ಸಾಲವನ್ನು ಮರುಪಾವತಿಸಲು ನೀಡಿದ ಹಣವನ್ನು ಸಾಲಕ್ಕೆ ಜಮೆ ಮಾಡದೆ 9 ಲಕ್ಷ ರೂಪಾಯಿ ಯನ್ನು ಅನಿಲ್ ಲೋಬೊ ತಿಂದಿದ್ದಾನೆ ಎಂದು ವಿವರಿಸಿದ್ದರು.
ಈ ಬಗ್ಗೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಯಲ್ಲಿ FIR ದಾಖಲಾಗಿದ್ದು ದಿನಾಂಕ 18-12-2024 ರಂದು ಭಾತೀಯ ನ್ಯಾಯ ಸಂಹಿತೆ ಸೆಕ್ಷನ್ 108 ಅಡಿಯಲ್ಲಿ ಅನಿಲ್ ಲೋಬೊ ನನ್ನು ಬಂದಿಸಲಾಗಿತ್ತು.
ಮನೋಹರ್ ಪಿರೇರಾ ಕುಟುಂಬಕ್ಕೆ ನ್ಯಾಯ ದೊರಕಿಸಬೇಕೆಂದು ಆಗ್ರಹಿಸಿ ಪರಿಸರದ ನೂರಾರು ಮಂದಿಯ ಸಹಿಯನ್ನೊಳಗೊಂಡ ಮನವಿಯನ್ನು ರಾಜ್ಯದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್, ಮುಖ್ಯಮಂತ್ರಿಗಳು, ಗ್ರಹಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ಕಮಿಷನರ್ ರವರಿಗೆ ನೀಡಲಾಗಿತ್ತು. ಮನವಿಗೆ ಸ್ಪಂದಿಸಿದ ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ರವರು ಮೃತರ ಮನೆಗೆ ಭೇಟಿ ನೀಡಿ ಕುಟುಂಬಕ್ಕೆ ಸಾoತ್ವನ ಹೇಳಿದ್ದಾರೆ. ನಿಷ್ಪಕ್ಷ ತನಿಖೆಗೆ ಸೂಕ್ತ ಕ್ರಮ ವಹಿಸುವುದಾಗಿ ಭರವಸೆ ನೀಡಿರುತ್ತಾರೆ.
ಎಂಸಿ ಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊನಿಂದ ತೊಂದರೆಗೊಳಗಾ ದ ಇತರ ಗ್ರಾಹಕರು ಸ್ಥಳದಲ್ಲಿ ಹಾಜರಿದ್ದು ತಮ್ಮ ಅಳಲನ್ನು ಯು. ಟಿ. ಖಾದರ್ ಬಳಿ ತೋಡಿಕೊಂಡರು. ಈ ವೇಳೆ ಹಾಜರಿದ್ದ ಸ್ಥಳೀಯರು ವಿಧಾನ ಸಭಾಧ್ಯಕ್ಷ ಯು. ಟಿ ಖಾದರ್ ರವರ ಬಳಿ ದಿವಂಗತ ಮನೋಹರ್ ರವರ ಬದುಕಿನ ಕಷ್ಟಗಳನ್ನು ವಿವರಿಸಿದರು ಹಾಗೂ ಅವರ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಜರಗಿಸಬೇಕೆಂದು ಒತ್ತಾಯಿಸಿದರು.
ಮಂಗಳೂರು/ಮಾಸ್ಕೋ: ಬಾಕುವಿನಿಂದ ಗ್ರೋಝ್ನಿಗೆ ತೆರಳುತ್ತಿದ್ದ 60 ಕ್ಕೂ ಅಧಿಕ ಪ್ರಯಾಣಿಕರಿದ್ದ ಅಝರ್ ಬೈಜಾನ್ ಏರ್ ಲೈನ್ಸ್ ಗೆ ಸೇರಿದ ವಿಮಾನವು ಕಝಾಕಿಸ್ತಾನದ ಅಕ್ಟೌದಲ್ಲಿ ಪತನಗೊಂಡಿತ್ತು.
ಕಝಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ದುರಂತ ಸಂದರ್ಭದಲ್ಲಿ ಉಕ್ರೇನ್ ಡ್ರೋನ್ ಗಳ ವಿರುದ್ದ ರಷ್ಯಾದ ವಾಯುಸೇನೆ ಕಾರ್ಯಾಚರಣೆ ನಡೆಸುತ್ತಿತ್ತು. ದಕ್ಷಿಣ ರಷ್ಯಾದಿಂದ ಡ್ರೋನ್ ಗಳನ್ನು ಹಾರಿಸಿದ ಬಳಿಕ ಕಝಕಿಸ್ತಾನ್ ನ ಅಕ್ಟೌ ನಗರದ ಬಳಿ ಅಜರ್ಬೈಜಾನ್ ನ J2-8243 ವಿಮಾನ ಪತನಗೊಂಡಿತು. 60ಕ್ಕೂ ಹೆಚ್ಚು ಮಂದಿ ಪ್ರಯಾಣಿಸುತ್ತಿದ್ದ ಈ ವಿಮಾನದಲ್ಲಿ 38 ಮಂದಿ ಸಾ*ವನ್ನಪ್ಪಿದ್ದು, ಉಳಿದು 29 ಮಂದಿ ಗಾಯಗೊಂಡಿದ್ದರು.
ಇದೀಗ ಈ ದುರಂತಕ್ಕೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕ್ಷಮೆ ಕೋರಿದ್ದಾರೆ. ಅಝರ್ ಬೈಜಾನ್ ಅಧ್ಯಕ್ಷ ಇಲ್ ಹ್ಯಾಮ್ ಅಲಿಯೆವ್ ಅವರಿಗೆ ಶನಿವಾರ ಕರೆ ಮಾಡಿದ ಪುಟಿನ್ ಕ್ಷಮೆ ಯಾಚಿಸಿದ್ದಾರೆ ಎಂದು ವರದಿಯಾಗಿದೆ.
ದುರಂತದಲ್ಲಿ ಪ್ರಾಣ ಕಳೆದುಕೊಂಡ ಕುಟುಂಬಗಳಿಗೆ ನನ್ನ ಆಳವಾದ ಸಂತಾಪ ಸೂಚಿಸುತ್ತೇನೆ. ಗಾಯಗೊಂಡವರು ಶೀಘ್ರದಲ್ಲೇ ಚೇತರಿಸಿಕೊಳ್ಳುವಂತೆ ಹಾರೈಸುತ್ತೇನೆ ಎಂದು ಕ್ರೆಮ್ಲಿನ್ ವರದಿ ಮಾಡಿದೆ.
ಇದರೊಂದಿಗೆ ಅಝರ್ ಬೈಜಾನ್ ನ ವಿಮಾನವನ್ನು ರಷ್ಯನ್ ಪಡೆಗಳು ಹೊಡೆದುದುರುಳಿಸಿರುವುದನ್ನು ಪುಟಿನ್ ಅವರು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆಯೆಂದು ವಿದೇಶಿ ಮಾಧ್ಯಮಗಳು ಬಣ್ಣಿಸಿವೆ.
ರಷ್ಯಾದ ವಾಯುರಕ್ಷಣಾ ವ್ಯವಸ್ಥೆಯು ಅಝರ್ ಬೈಜಾನ್ ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ವೈಮಾನಿಕ ತಜ್ಞರು ಹೇಳಿದ್ದಾರೆ.
ಕಝಕಿಸ್ತಾನದ ಗ್ರೋಝ್ನಿಯಲ್ಲಿ ಉಕ್ರೇನ್ ಡ್ರೋನ್ ದಾಳಿ ನಡೆಸಿದ್ದರಿಂದ ರಷ್ಯಾದ ವಾಯುರಕ್ಷಣಾ ವ್ಯವಸ್ಥೆಗಳು ಪ್ರತಿದಾಳಿ ನಡೆಸಿರುವುದಾಗಿ ರಷ್ಯಾವು ಶನಿವಾರ ಅಧಿಕೃತ ಹೇಳಿಕೆಯೊಂದರಲ್ಲಿ ತಿಳಿಸಿದೆ. ಆದರೆ ಇದು ವಿಮಾನದ ಪತನಕ್ಕೆ ಕಾರಣವಾಗಿದೆಯೆಂದು ಹೇಳಿಕೊಂಡಿರಲಿಲ್ಲ.
ಸಮಯ ಅನ್ನೋದು ಬೆಲೆ ಕಟ್ಟಲಾಗದ್ದು. ಆದ್ರೆ ಅದೇ ಸಮಯವನ್ನು ತಿಳಿಸುವ ವಾಚ್ಗೆ ಲಕ್ಷ ಲಕ್ಷ ಕೋಟಿ ಕೋಟಿ ಬೆಲೆಯಿದೆ. ಅಂಬಾನಿಯ ಅಂಟಿಲಿಯಾ ಬಂಗಲೆಯಲ್ಲಿರುವ ಕಾರ್ಗಳ ಮೌಲ್ಯದ ವಾಚ್ಗಳು ಕೂಡ ಬಜಾರ್ನಲ್ಲಿ ಬಂದಿವೆ.ವಾಚ್ಗಳು ಈಗ ಕೇವಲ ಟೈಮ್ಪೀಸ್ ಆಗಿ ಉಳಿದಕೊಂಡಿಲ್ಲ. ಐಷಾರಾಮಿತನದ ಗುರುತಾಗಿ ಉಳಿದಕೊಂಡಿವೆ. ಹೀಗಾಗಿಯೇ ಎಲಾನ್ ಮಸ್ಕ್, ಮಾರ್ಕ್ ಜುಕರ್ ಬರ್ಗ್ ಇವರು ಸಂದರ್ಶನದಲ್ಲಿ, ವಿಡಿಯೋದಲ್ಲಿ ಕಾಣಿಸಿಕೊಂಡಾಗ ಅವರು ಒಂದು ವೇಳೆ ವಾಚ್ ಧರಿಸಿದ್ದರೆ ಆ ವಾಚ್ನ ಬ್ರ್ಯಾಂಡ್ ಯಾವುದು, ಅದರ ಬೆಲೆ ಎಷ್ಟು ಇವೆಲ್ಲ ಮಾತುಗಳು ಮುನ್ನೆಲೆಗೆ ಬರುತ್ತವೆ. ಈಗ ಅದೇ ರೀತಿ ವಿಶ್ವದ ಅತ್ಯಂತ ದುಬಾರಿ ವಾಚ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಗಳು ಆಗುತ್ತಿವೆ.
ಸುಪ್ರೀಮ್ ಲಕ್ಸುರಿ ಗುರುತಾಗಿ, ಐಷಾರಾಮಿತನದ ಕಟ್ಟ ಕಡೆಯ ಎತ್ತರವಾಗಿ ಗುರುತಿಸಿಕೊಂಡಿದೆ ಹ್ಯಾಲುಸಿನೇಷನ್ ಎಂಬ ಈ ಡೈಮಂಡ್ ವಾಚ್. ಈ ವಾಚ್ನ ಬೆಲೆ ಕೇಳಿದ್ರೆ ಎಂತವರ ತಲೆಯೂ ಕೂಡ ಒಮ್ಮೆ ಗಿರ್ ಅನ್ನದೇ ಇರಲ್ಲ. ಈ ವಾಚ್ನ ಬೆಲೆ ಬರೋಬ್ಬರಿ 500 ಮಿಲಿಯನ್ ಡಾಲರ್, ಅಂದ್ರೆ ಭಾರತೀಯ ರೂಪಾಯಿಗಳಲ್ಲಿ 466 ಕೋಟಿ ರೂಪಾಯಿ ಎಂದರೆ ನೀವು ನಂಬಲೇಬೇಕು.
ಇದನ್ನು ಅಪ್ಪಟ ವಜ್ರಗಳ ಹರುಳಿನಿಂದಲೇ ತಯಾರಿಸಲಾಗಿದೆ. ಲಾರೆನ್ಸ್ ಗ್ರಾಫ್ ಎಂಬ ಉದ್ಯಮಿ 2014ರಲ್ಲಿ ಈ ಒಂದು ಬಾಸಲ್ವರ್ಲ್ಡ್ಗೆ ಕಾಲಿಟ್ಟಿದ್ದರು. ವಿಶೇಷವಾದದ್ದು ಹಾಗೆ ಅಷ್ಟೇ ಐಶಾರಾಮಿ ಹಾಗೂ ಆಕರ್ಷಕ ವಾಚ್ ಸಿದ್ಧಪಡಿಸುವ ಗುರಿ ಅವರದ್ದಿತ್ತು. ಹೀಗಾಗಿ ಹಲವು ಬಣ್ಣದ ವಜ್ರಗಳಿಂದ ಕೂಡಿದ 110 ಕ್ಯಾರೆಟ್ನ ಈ ವಾಚ್ನ್ನು ಸಿದ್ಧಪಡಿಸಿದ್ದಾರೆ. ಈ ಹ್ಯಾಲುಸಿನೇಷನ್ ವಾಚ್ ಜಗತ್ತಿನಲ್ಲಿ ಅತ್ಯಂತ ವಿರಳವಾದ ಹಾಗೂ ದುಬಾರಿಯಾದ ವಾಚ್ನ ಪಟ್ಟಿಯಲ್ಲಿದೆ. ಹಲವು ಬಣ್ಣಗಳಲ್ಲಿ ಬರುವ ಈ ವಾಚ್ ತಿಳಿ ಗುಲಾಬಿ, ನೀಲಿ, ಹಸಿರು, ಆರೆಂಜ್ ಹಾಗೂ ಹಳದಿ ಬಣ್ಣಗಳಲ್ಲಿ ಈ ವಾಚ್ಗಳನ್ನು ಸಿದ್ಧಪಡಿಸಲಾಗಿದೆ.
ಇನ್ನು ಅನೇಕ ವಿನ್ಯಾಸಗಳಲ್ಲಿಯೂ ಕೂಡ ಈ ವಾಚ್ ಲಭ್ಯವಿದೆ. ಹೃದಯದ ವಿನ್ಯಾಸ, ಪೇರಳೆ ವಿನ್ಯಾಸ ಹೀಗೆ ಒಟ್ಟು ನಾಲ್ಕು ವಿನ್ಯಾಸಗಳಲ್ಲಿ ಇದು ಲಭ್ಯವಿದೆ. ಯುನಿಕ್ ಆಗಿರುವ ಶೇಪ್ ಹಾಗೂ ಕಲರ್ನಲ್ಲಿ ಲಭ್ಯವಿದ್ದು. ನಮ್ಮ ನಿಮ್ಮಂತವರ ಕೈಗೆ ನಿಲುಕದ ಎತ್ತರದಲ್ಲಿ ಇದೆ.