Home ಪ್ರಮುಖ ಸುದ್ದಿ ವಾಟ್ಸಾಪ್‌ಗಳಲ್ಲಿ ಕೋಮು ಪ್ರಚೋದನಾ ಸಂದೇಶ ರವಾನೆ : ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿದ ವಿಟ್ಲ ಪೊಲೀಸರು

ವಾಟ್ಸಾಪ್‌ಗಳಲ್ಲಿ ಕೋಮು ಪ್ರಚೋದನಾ ಸಂದೇಶ ರವಾನೆ : ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿದ ವಿಟ್ಲ ಪೊಲೀಸರು

ವಾಟ್ಸಾಪ್‌ಗಳಲ್ಲಿ ಕೋಮು ಪ್ರಚೋದನಾ ಸಂದೇಶ ರವಾನೆ : ಅಪ್ರಾಪ್ತ ಸೇರಿ ನಾಲ್ವರನ್ನು ಬಂಧಿಸಿದ ವಿಟ್ಲ ಪೊಲೀಸರು

ಬಂಟ್ವಾಳ : ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಮಾಹಿತಿ ಹಾಗೂ ಕೋಮು ಪ್ರಚೋದನೆಯ ಸಂದೇಶಗಳನ್ನು ಹರಡುತ್ತಿದ್ದ ನಾಲ್ವರನ್ನು ವಿಟ್ಲ ಪೊಲೀಸರು ಬಂಧಿಸದ್ದಾರೆ. ಬಂಧಿತರಲ್ಲಿ ಓರ್ವ ಅಪ್ರಾಪ್ತ ನೂ ಸೇರಿದ್ದಾನೆ.

ಸುಳ್ಯ ಮೂಲದ ಕಳಂಜ ನಿವಾಸಿ ಸಿದ್ದಿಕ್, ಮಂಚಿಯ ಕುಕ್ಕಾಜೆ ನಿವಾಸಿ ಮಹಮ್ಮದ್ ಕೆ , ಪುತ್ತೂರು ತಿಂಗಳಾಡಿ ಮೂಲದ ಹನೀಫ್ ಬಂಧಿತ ಆರೋಪಿಗಳಾಗಿದ್ದಾರೆ. ಸಜುಪನಡು ಮೂಲದ 16ವರ್ಷದ ಅಪ್ರಾಪ್ತನನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ. ಬೇರೆ ಬೇರೆ ನಂಬರ್ ಮೂಲಕ ಸಂಘಟನೆಯ ಗುರುತು ಇಲ್ಲದಂತೆ ಮಾಡಿ ಧರ್ಮವನ್ನು ನಾಶ ಮಾಡುತ್ತೇವೆ ಎನ್ನು ರೀತಿಯಲ್ಲಿ ಸುಳ್ಳು ಮಾಹಿತಿ ಹಾಗೂ ಕೋಮು ಪ್ರಚೋದನೆ ಮಾಡುವ ರೀತಿಯ ಸಂದೇಶವನ್ನು ಇವರು ಬೇರೆ ಬೇರೆ ವ್ಯಕ್ತಿಗಳಿಗೆ ಪಸರಿಸಿದ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ತನಿಖೆಗೆ ಮುಂದಾದ ಪೋಲೀಸರು ಆರೋಪಿಗಳನ್ನು ವಿವಿಧ ಕಡೆಗಳಿಂದ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಸಂದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪಸರಿಸಿದ ಬಗ್ಗೆ ಒಪ್ಪಿಕೊಂಡಿದ್ದಾರೆನ್ನಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಅಪ್ರಾಪ್ತನನ್ನು ಬಾಲನ್ಯಾಯ ಮಂಡಳಿಗೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.ಇದೇ ಪ್ರಕರಣದ ಆರೋಪಿಯೊಬ್ಬನ ಬಂಧನಕ್ಕ ಪೋಲೀಸರು ತೆರಳಿದ್ದ ಸಮಯದಲ್ಲಿ ಜನರು ಸೇರಿಕೊಂಡು ಪೋಲೀಸರ ಕಾರ್ಯಾಚರಣೆಗೆ ತಡೆಯೊಡಿದ್ದ ಘಟನೆಯೂ ನಡೆದಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಲಕ್ಷ್ಮೀ ಪ್ರಸಾದ್, ಡಿವೈಎಸ್‍ಪಿ ವೆಲೆಂಟನ್ ಡಿಸೋಜ್ ಮಾರ್ಗದರ್ಶನದಲ್ಲಿ ವೃತ್ತ ನಿರೀಕ್ಷಕ ಟಿ. ಡಿ. ನಾಗರಾಜ್ ಅವರ ನೇತೃತ್ವದಲ್ಲಿ ವಿಟ್ಲ ಪ್ರೊಬೆಷನರಿ ಪಿಎಸ್‍ಐ ವಿನೋದ್ ಅವರನ್ನೊಳಗೊಂಡ ಪ್ರಸನ್ನ ಕುಮಾರ್, ವಿನಾಯಕ್, ಪ್ರತಾಪ್, ಮಂಜುನಾಥ, ಲೋಕೇಶ್, ಮಧು ವೈ ವಿಶ್ವನಾಥ ಅವರ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisment -

RECENT NEWS

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ 

ಚೀನಾದಲ್ಲಿ ಕೊರೊನಾ ವೈರಸ್‌ ಅಟ್ಟಹಾಸ: 75,000 ಜನರಲ್ಲಿ ಸೋಂಕು ಪತ್ತೆ  ಚೀನಾ: ಚೀನಾದ ಹುಬೈನಲ್ಲಿ ಕೊರೊನಾ ವೈರಸ್ ಗೆ ಮತ್ತೆ 115 ಜನರು ಬಲಿಯಾಗಿದ್ದು ಮೃತರ ಸಂಖ್ಯೆ 2,236ಕ್ಕೆ ತಲುಪಿದೆ. ಚೀನಾದಲ್ಲಿ 75,000 ಜನರು...

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ.ಚೆನ್ನಿಗಪ್ಪ ಇನ್ನಿಲ್ಲ

ಮಾಜಿ ಸಚಿವ, ಹಿರಿಯ ಜೆಡಿಎಸ್ ನಾಯಕ ಸಿ. ಚೆನ್ನಿಗಪ್ಪ ಇನ್ನಿಲ್ಲ ಬೆಂಗಳೂರು: ಮಾಜಿ ಸಚಿವ, ಜೆಡಿಎಸ್ ಪಕ್ಷದ ಹಿರಿಯ ಮುಖಂಡರಾಗಿದ್ದ ಸಿ. ಚೆನ್ನಿಗಪ್ಪ ಇಂದು ನಿಧನರಾಗಿದ್ದಾರೆ. ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಚೆನ್ನಿಗಪ್ಪ ಅವರಿಗೆ...

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ

ತ್ಯಾಜ್ಯ ಸಂಸ್ಕರಣಾ ಘಟಕ ಕಡ್ಡಾಯ: ಉಲ್ಲಂಘಿಸಿದವರಿಗೆ ಮ.ನ.ಪಾ ದಂಡ ಮಂಗಳೂರು: ತ್ಯಾಜ್ಯ ಸಂಸ್ಕರಣಾ ಘಟಕ ಹೊಂದುವಂತೆ ಮಹಾನಗರ ಪಾಲಿಕೆ ಆಯುಕ್ತರು ನೀಡಿದ್ದ ಆದೇಶವನ್ನು ಉಲ್ಲಂಘಿಸಿದ ಹತ್ತು ಅಪಾರ್ಟ್ ಮೆಂಟ್ ಗಳಿಗೆ ದಂಡ ವಿಧಿಸಲಾಗಿದೆ. ಕಳೆದ ಸೆಪ್ಟಂಬರ್...

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ

ಪಾಕ್ ಪರ ಅಮೂಲ್ಯ ಘೋಷಣೆ: 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಆದೇಶ ಬೆಂಗಳೂರು: ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಸಮಾವೇಶದ ವೇಳೆ ಪಾಕಿಸ್ತಾನ ಪರ ಘೋಷಣೆ ಕೂಗಿದ ಅಮೂಲ್ಯ ಲಿಯೋನಾಳನ್ನು ಬಂಧಿಸಿದ ಪೋಲಿಸರು...