Connect with us

    ಚೀನಾದಲ್ಲಿ ಕೊರೊನಾ ವೈರಸ್ ಭೀತಿ ಅತಂತ್ರ ಸ್ಥಿತಿಯಲ್ಲಿ ಪಾಕ್ ವಿದ್ಯಾರ್ಥಿಗಳು

    Published

    on

    ಚೀನಾ: ಮಹಾಮಾರಿ ಕೊರೊನಾ ವೈರಸ್‌ನ ಕದಂಬ ಬಾಹುಗಳು ಚೀನಾದಲ್ಲಿ ದಿನದಿಂದ ದಿನಕ್ಕೆ ವಿಸ್ತಾರಗೊಳ್ಳುತ್ತಾ ಹೋಗುತ್ತಿದ್ದು,ನೂರಾರು ಜನ ಈಗಾಗಲೇ ಸಾವನ್ನಪಿದ್ದಾರೆ. ಸಾವಿರಾರು ಜನ ವೈರಸ್‌ ಸೋಂಕಿನಿಂದ ಬಳಲುತ್ತಿದ್ದಾರೆ.

    ಭಾರತ ಸರ್ಕಾರ ತನ್ನ ರಾಯಭಾರ ಕಚೇರಿಯಿಂದ ವಾಹನ ಕಳಿಸಿ, ತನ್ನ ದೇಶದ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುತ್ತಿದೆ. ಬಾಂಗ್ಲಾದೇಶವೂ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳುವ ಅಭಯ ನೀಡಿದೆ. ಆದರೆ ನೆರೆಯ ಪಾಕಿಸ್ಥಾನ ಮಾತ್ರ ಚೀನಾದಲ್ಲಿರುವ ತಮ್ಮ ವಿದ್ಯಾರ್ಥಿಗಳನ್ನು ವಾಪಸ್‌ ಕರೆಸಿಕೊಳ್ಳುವ ಯಾವುದೇ ನಿರ್ಧಾರ ಕೈಗೊಂಡಿಲ್ಲ.

    ಚೀನದಲ್ಲಿರುವ ಪಾಕಿಸ್ಥಾನಿ ವಿದ್ಯಾರ್ಥಿಗಳ ಬದುಕು ಅತಂತ್ರ ಸ್ಥಿತಿಯಲ್ಲಿವೆ. ಪಾಕಿಸ್ತಾನದಲ್ಲಿ ನಿಗಾ ಘಟಕಗಳ ಸ್ಥಾಪನೆ ಅಸಾಧ್ಯ ಎನಿಸುವಂಥ ಪರಿಸ್ಥಿತಿ ಇರುವುದೇ ಪಾಕಿಸ್ತಾನವು ತನ್ನ ವಿದ್ಯಾರ್ಥಿಗಳನ್ನು ಹಿಂದಕ್ಕೆ ಕರೆಸಿಕೊಳ್ಳಲು ಇರುವ ಮುಖ್ಯ ತೊಡಕು. ‘ಚೀನಾದಲ್ಲಿ 30 ಸಾವಿರ ಪಾಕಿಸ್ತಾನ್ ಪ್ರಜೆಗಳಿದ್ದಾರೆ. ವೈರಸ್ ಭೀತಿಯ ಕೇಂದ್ರ ನೆಲೆಯಾಗಿರುವ ವುಹಾನ್‌ನಲ್ಲಿ 500ಕ್ಕೂ ಅಧಿಕ ವಿದ್ಯಾರ್ಥಿಗಳಿದ್ದಾರೆ. ಆದರೆ ಅವರನ್ನು ವಾಪಸ್ ಕರೆತರಲು ಸಾಧ್ಯವೇ? ಅವರನ್ನು ಕರೆ ತಂದರೆ ನಿಗಾ ಘಟಕದಲ್ಲಿ ಕೆಲ ದಿನಗಳು ಉಳಿಸಿ, ಆರೋಗ್ಯ ಕುಟುಂಬಗಳಿಗೆ ಕಳಿಸುವಂಥ ವ್ಯವಸ್ಥೆ ರೂಪಿಸಲು ಸರ್ಕಾರಕ್ಕೆ ಅಸಾಧ್ಯವೆಂದೇ ಹೇಳಲಾಗುತ್ತಿದೆ.

    ಚೀನದಲ್ಲಿರುವ ಪಾಕಿಸ್ತಾನಿ ವಿದ್ಯಾರ್ಥಿಗಳ ಅಳಲು ಮುಗಿಲು ಮುಟ್ಟಿದೆ. ನಾವು ಪಾಕಿಸ್ತಾನಿಯರು ಮಾಡಿದ ತಪ್ಪೇನು? ನಮ್ಮನ್ನೇಕೆ ನಮ್ಮ ಸರ್ಕಾರ ಅನಾಥರನ್ನಾಗಿ ಪರದೇಶದಲ್ಲಿಯೇ ಸಾಯಲು ಬಿಟ್ಟುಬಿಟ್ಟಿದೆ? ಭಾರತ ಸರ್ಕಾರದ ಕ್ರಮಗಳನ್ನು ನೋಡಿಯಾದರೂ ಪಾಠ ಕಲಿಯಿರಿ ಇಮ್ರಾನ್ ಖಾನ್ ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ವಿದೇಶಕ್ಕೆ ಹೋಗಿ, ಓದಿ, ದುಡಿದು ಸ್ವದೇಶಕ್ಕೆ ಹಣ ಕಳಿಸಿ. ಪಾಕಿಸ್ತಾನವನ್ನು ಸಂಪದ್ಭರಿತ ದೇಶ ಮಾಡಿ ಎಂದು ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದರು. ಅವರ ಮಾತನ್ನು ನಾವು ಗೌರವಿಸಿದೆವು. ಆದರೆ ನಮ್ಮ ಸರ್ಕಾರ ನಮ್ಮನ್ನು ಮರೆತೇ ಹೋಯಿತು’ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ. ಇತ್ತ ಕಡೆ ತನ್ನ ವಿದ್ಯಾರ್ಥಿಗಳನ್ನು ಸ್ವದೇಶಕ್ಕೆ ಕರೆಸಿಕೊಳ್ಳದ ಇಮ್ರಾನ್ ಖಾನ್ ನೇತೃತ್ವದ ಸರ್ಕಾರದ ವಿರುದ್ಧ ಪಾಕಿಸ್ತಾನದ ವಿವಿಧೆಡೆ ಪ್ರತಿಭಟನೆಗಳು ಆರಂಭವಾಗಿದೆ.

    ಇತ್ತ ಕಡೆ ಚೀನದಲ್ಲಿ ಕರಾಳ ಸ್ಥಿತಿ ನಿರ್ಮಾಣವಾಗಿದೆ. ಚೀನದ ಆನೇಕ ಕೊರೊನಾ ವೈರಸ್‌ ಪೀಡಿತ ಪ್ರದೇಶಗಳಲ್ಲಿ ಜನರು ಮನೆಯಿಂದ ಹೊರಗೆ ಬಾರದಂತೆ ನಿಷೇಧ ಹೇರಲಾಗಿದೆ. ಯಾವಾಗಲೂ ವಾಹನಗಳಿಂದ ತುಂಬಿ ತುಳುಕುತ್ತಿದ್ದ ಪ್ರಮುಖ ರಸ್ತೆಗಳು ಸಂಚಾರವೇ ಇಲ್ಲದೆ ಬಿಕೋ ಎನ್ನುತ್ತಿವೆ.

     

     

    Click to comment

    Leave a Reply

    Your email address will not be published. Required fields are marked *

    LATEST NEWS

    ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಅಪ್ರಾಪ್ತನ ಜೊತೆ 10 ವರ್ಷದ ಬಾಲಕಿ ಪರಾರಿ

    Published

    on

    ವಡೋದರ: ಇನ್ಸ್ಟಾಗ್ರಾಮ್‌ನಲ್ಲಿ ಪರಿಚಯವಾದ ಗುಜರಾತ್‌ನ ಧನ್ಸೂರಾ ಗ್ರಾಮದ ಹತ್ತು ವರ್ಷ ವಯಸ್ಸಿನ 5ನೇ ತರಗತಿ ವಿದ್ಯಾರ್ಥಿನಿ ಅಪ್ರಾಪ್ತ ವಯಸ್ಸಿನ ಬಾಲಕನ ಜೊತೆ ಓಡಿ ಹೋಗಿರುವ ಘಟನೆ ನಡೆದಿದೆ.

    ಕಳೆದ ಕೆಲ ಸಮಯದಿಂದ ತನ್ನ ತಾಯಿಯ ಮೊಬೈಲ್‌ನಲ್ಲಿ ಇನ್ಸ್ಟಾಗ್ರಾಮ್‌ ಖಾತೆಯನ್ನು ಬಳಸಿ 16 ವರ್ಷದ ಬಾಲಕನ ಜೊತೆ ಚಾಟಿಂಗ್ ಮಾಡಲು ಶುರು ಮಾಡಿದ್ದಾಳೆ. ಇಬ್ಬರ ನಡುವಿನ ಮೆಸೇಜ್ ಆತ್ಮೀಯತೆಗೆ ತಿರುಗಿದೆ.

    ಇಬ್ಬರು ಪರಸ್ಪರ ಪ್ರೀತಿಸಲು ಶುರು ಮಾಡಿದ್ದು, ಅದರಂತೆ ಡಿಸೆಂಬರ್ 31ರಂದು ಬಾಲಕಿ ಮನೆಯಿಂದ ಹೊರಗೆ ಹೋಗಿದ್ದಾಳೆ. ಇತ್ತ ಬಾಲಕಿಯ ಮನೆಯವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣವನ್ನು ದಾಖಲಿಸಿದ್ದಾರೆ. ತಮ್ಮ ಮಗಳನ್ನು ಕಿಡ್ನಾಪ್ ಮಾಡಿರಬಹುದೆನ್ನುವ ಸಂಶಯದ ಮೇರೆಗೆ ದೂರು ದಾಖಲಿಸಿದ್ದಾರೆ. ದೂರು ದಾಖಲಿಸಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಅಪ್ರಾಪ್ತರನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಆ ಬಳಿಕ ಇಬ್ಬರನ್ನು ವಿಚಾರಣೆ ನಡೆಸಿದ್ದಾರೆ.

    ತಾವಿಬ್ಬರು ಇನ್ಸ್ಟಾಗ್ರಾಮ್‌ ಮೂಲಕ ಪರಿಚಿತರು. ಇಬ್ಬರು ಪ್ರೀತಿಸುತ್ತಿದ್ದೇವೆ. ತಮ್ಮ ಮೂವರು ಸ್ನೇಹಿತರ ಸಹಾಯ ಪಡೆದು ಓಡಿಹೋಗಲು ನಿರ್ಧಾರ ಮಾಡಿದ್ದು, ಅದಕ್ಕಾಗಿ ಮನೆ ಬಿಟ್ಟು ಬಂದಿರುವುದಾಗಿ ಪೊಲೀಸರ ಮುಂದೆ ಇಬ್ಬರೂ ಅಪ್ರಾಪ್ತರು ಹೇಳಿದ್ದಾರೆ. ಸದ್ಯ ಇಬ್ಬರನ್ನು ಬಾಲಾಪರಾಧಿಗ್ರಹಕ್ಕೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.

    Continue Reading

    DAKSHINA KANNADA

    ಗುರುಪುರ : ನಗರದ ಹಲವು ಅಂಗಡಿಗಳಲ್ಲಿ ಕಳ್ಳತನ

    Published

    on

    ಬಜಪೆ: ಎಲೆಕ್ಟ್ರಾನಿಕ್‌ ಅಂಗಡಿ, ಬೇಕರಿ, ತರಕಾರಿ ಅಂಗಡಿ ಹಾಗೂ ಬಂಡ ಶಾಲೆಯ ಒಂದು ಗೂಡಂಗಡಿಗೆ ಶುಕ್ರವಾರದ ರಾತ್ರಿ ವೇಳೆಯಲ್ಲಿ ಕಳ್ಳರು ನುಗ್ಗಿ, ಮೊಬೈಲ್‌, ಎಲೆಕ್ಟ್ರಾನಿಕ್‌ ಸಾಮಾಗ್ರಿ, ಚಿನ್ನದ ಉಂಗುರ, ನಗದು, ಬೇಕರಿಯಿಂದ ತಿಂಡಿ, ನಗದು, ತರಕಾರಿ ಅಂಗಡಿಯಿಂದ ನಗದು ನಾಣ್ಯ, ಸಿಗರೇಟ್‌, ಗೂಡಂಗಡಿಯಿಂದ ಬಿಸ್ಕತ್‌ನ್ನು ಕಳವು ಮಾಡಿರುವ ಘಟನೆ ಗುರುಪುರ ಪೇಟೆಯಲ್ಲಿ ನಡೆದಿದೆ.


    ಗುರುಪುರ ಪೇಟೆಯ ಉಮೇಶ್‌ ಭಟ್‌ ರ ಎಲೆಕ್ಟ್ರಾನಿಕ್‌ ಅಂಗಡಿಗೆ ನುಗ್ಗಿ 12 ಮೊಬೈಲ್‌ ಫೋನ್‌, 20 ಸಾವಿರ ರೂಪಾಯಿ ಮೊತ್ತದ ಇಲೆಕ್ಟ್ರಾನಿಕ್‌ ಸಾಮಾಗ್ರಿಗಳು, 60 ಸಾವಿರ ರೂಪಾಯಿ ಮೌಲ್ಯದ ಚಿನ್ನದ ಉಂಗುರ, ಸುಮಾರು 25 ಸಾವಿರ ರೂಪಾಯಿ ನಗದು ಕಳವು ಮಾಡಲಾಗಿದೆ. ಉಮೇಶ್‌ ನ ಸಹೋದರ ರಮೇಶ್‌ ಭಟ್‌ ರ ಬೇಕರಿ ಅಂಗಡಿಗೆ ನುಗ್ಗಿದ ಕಳ್ಳರು ಬೇಕರಿ ತಿಂಡಿಗಳನ್ನು ಹಾಗೂ ನಗದುಗಳನ್ನು ಶಟರ್‌ ಬೀಗ ಒಡೆದು ಕಳವು ಮಾಡಿದ್ದಾರೆ. ಸಂಶುದ್ದೀನ್‌ ನ ತರಕಾರಿ ಅಂಗಡಿಯ ಮರದ ಬಾಗಿಲಿನ ಬೀಗವನ್ನು ಒಡೆದು ನುಗ್ಗಿದ ಕಳ್ಳರು, ಡಬ್ಬಿಯಲ್ಲಿದ್ದ ಹತ್ತು ರೂಪಾಯಿಯ ನ್ಯಾಣ ಸುಮಾರು 10 ಸಾವಿರ ರೂಪಾಯಿ ನಗದು, ಸುಮಾರು 10ಸಾವಿರ ರೂಪಾಯಿ ಮೌಲ್ಯದ ಸಿಗರೇಟ್‌ ಸಹಿತ 20 ಸಾವಿರ ರೂಪಾಯಿ ಮೌಲ್ಯದ ಸೊತ್ತು ಕಳವು ಮಾಡಿದ ಕಳ್ಳರು ಅಂಗಡಿಯಲ್ಲಿನ ಫ್ರೀಜ್‌ನಲ್ಲಿದ್ದ ಮೊಸರನ್ನು ಕುಡಿದಿದ್ದಾರೆ ಹಾಗೂ ಚೆಲ್ಲಿದ್ದಾರೆ. ಅಂಗಡಿಯಲ್ಲಿದ್ದ ಅನಾನಸನ್ನು ತುಂಡು ಮಾಡಿ,ತಿಂದಿದ್ದಾರೆ. ಇಲ್ಲಿ ಕಳ್ಳರು ಹಲವು ಹೊತ್ತು ಕಾಲ ಕಳೆದಿರುವುದು ಕಂಡು ಬಂದಿದೆ.ಬಂಡಸಾಲೆಯಲ್ಲಿ ಧರ್ಮಣ ಪೂಜಾರಿ ಗೂಡಂಗಡಿಯ ಶಟರ್‌ನ ಬೀಗ ಮುರಿದು ಬಿಸ್ಕತ್‌ನ್ನು ಕಳವು ಮಾಡಿದ್ದಾರೆ.

    ಸುಮಾರು ರಾತ್ರಿ 2 ರಿಂದ 3 ಗಂಟೆಯೊಳಗೆ ಈ ಕಳವು ನಡೆದಿದೆ. ಇದು ಒಂದು ಕಳ್ಳರ ತಂಡವಾಗಿದ್ದು, ಗುರುಪುರ ಪೇಟೆಯಲ್ಲಿ ಸಿಸಿ ಕ್ಯಾಮಾರದಲ್ಲಿ ಕಳ್ಳರ ಸುಳಿವು ಸಿಗುವ ಬಗ್ಗೆ ಸಾರ್ವಜನಿಕರು ತಿಳಿಸಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಕಳವಿನ ಬಗ್ಗೆ ಮಾಹಿತಿ ಪಡೆದು ಹೇಳಿಕೆ ತೆಗೆದುಕೊಂಡು ಹೋಗಿದ್ದಾರೆ.

    Continue Reading

    LATEST NEWS

    ಮುಂದಿನ 3 ದಿನ ಕರ್ನಾಟಕದಲ್ಲಿ ಶೀತಗಾಳಿ ಎಚ್ಚರಿಕೆ

    Published

    on

    ಬೆಂಗಳೂರು: ಮುಂದಿನ ಮೂರು ದಿನ ಕರ್ನಾಟಕದ ಹಲವು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

    ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರಾವಳಿ, ಉತ್ತರ, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಶೀತಗಾಳಿಯ ಎಚ್ಚರಿಕೆಯನ್ನು ನೀಡಲಾಗಿದೆ. ಉತ್ತರ ಕನ್ನಡ, ಬೆಳಗಾವಿ, ಬೀದರ್, ವಿಜಯಪುರ, ಕಲಬುರಗಿ, ಹಾವೇರಿ ಹಾಗೂ ರಾಯಚೂರು ಜಿಲ್ಲೆಗಳಲ್ಲಿ ಶೀತಗಾಳಿ ಇರಲಿದೆ.

    ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಮಂಡ್ಯ ದಾವಣಗೆರೆ, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಿಗೆ ಎಚ್ಚರಿಕೆ ನೀಡಿದ್ದು, ಜನ ಅಗತ್ಯ ಎಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ಸೂಚಿಸಿದೆ.

    ಇನ್ನು ರಾಜ್ಯಾದ್ಯಂತ ಚುಮುಚುಮು ಚಳಿ ಹೆಚ್ಚಾಗಿದ್ದು, ಕೆಲವೆಡೆ 15 ಡಿಗ್ರಿಗಿಂತ ಕೆಳಗೆ ತಾಪಮಾನ ಕುಸಿದಿದೆ. ಮುಂದಿನ 3 ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯುವ ಸಾಧ್ಯತೆ ಇದೆ. ರಾಜ್ಯಾದ್ಯಂತ ಕನಿಷ್ಠ ಉಷ್ಣಾಂಶ 2 ರಿಂದ 4 ಡಿಗ್ರಿ ಸೆಲ್ಸಿಯಸ್ ಇಳಿಕೆಯಾಗುವ ಸಾಧ್ಯತೆ ಇದ್ದು, ರಾಜ್ಯಾದ್ಯಂತ ಮಂಜು ಮುಸುಕಿನ ವಾತಾವರಣ ಮುಂದುವರೆಯಲಿದೆ.

    Continue Reading

    LATEST NEWS

    Trending