Tuesday, May 30, 2023

 ಕಾಶೀ ಮಠದಲ್ಲಿ ಕಾಶೀ ಮಠಾಧೀಶರ ದಿವ್ಯ ಹಸ್ತಗಳಿಂದ ನೆರವೇರಿದ ಋಗುಪಾಕರ್ಮ..

 ಕಾಶೀ ಮಠದಲ್ಲಿ ಕಾಶೀ ಮಠಾಧೀಶರ ದಿವ್ಯ ಹಸ್ತಗಳಿಂದ ನೆರವೇರಿದ ಋಗುಪಾಕರ್ಮ

 ಚಿತ್ರ : ಮಂಜು ನೀರೇಶ್ವಾಲ್ಯ

ಮಂಗಳೂರು : ಶ್ರೀ ಕಾಶೀ ಮಠ ಸಂಸ್ಥಾನದ ಮಠಾಧೀಶರಾದ ಶ್ರೀಮದ್ ಸಂಯಮಿಂದ್ರ ತೀರ್ಥ ಸ್ವಾಮೀಜಿಯವರ ದಿವ್ಯ ಹಸ್ತಗಳಿಂದ  ನೂಲ ಹುಣ್ಣಿಮೆ- ಋಗುಪಾಕರ್ಮ ಪ್ರಯುಕ್ತ ಕೊಂಚಾಡಿ ಕಾಶಿ ಮಠದಲ್ಲಿ ಚಾತುರ್ಮಾಸ ನಿರತ ಶ್ರೀಗಳವರು ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀ ವ್ಯಾಸರಘುಪತಿ ನರಸಿಂಹ ದೇವರಿಗೆ ವೈದಿಕ ವಿಧಿ ವಿಧಾನದೊಂದಿಗೆ ಪೂಜಿಸಲ್ಪಟ್ಟ ಪವಿತ್ರ ನೂಲನ್ನು ತೊಡಿಸಿದರು.

ಬಳಿಕ ನೆರೆದ ಸಮಾಜ ಬಾಂಧವರಿಗೆ ಯಜ್ನೋಪವೀತಧಾರಣೆ ಶ್ರೀಗಳವರ ಅಮೃತ ಹಸ್ತಗಳಿಂದ ನೆರವೇರಿತು .
ಶ್ರಾವಣ ಶುದ್ಧ ಪೌರ್ಣಮಿ (ನೂಲ ಹುಣ್ಣಿಮೆಯ)ಯಂದು ಆಚರಿಸಲಾಗುವ ಯಜ್ಞೋಪವೀತ ಧಾರಣೆ ನಗರದ ಸೇರಿದಂತೆ ತಾಲೂಕಿನ ಹಲವು ಭಾಗಗಳಲ್ಲಿ ಭಾನುವಾರ ಶ್ರದ್ಧಾ ಭಕ್ತಿಯಿಂದ ನಗರದ ಗೌಡ ಸಾರಸ್ವತ ಸಮಾಜದ ವಿವಿಧ ದೇವಳಗಳಲ್ಲಿ ಇಂದು ನೆರವೇರಿತು .

ಉಪಾಕರ್ಮ ಆಚರಣೆ ಎಂದರೆ ಉಪನಯನ ನಂತರ ಪ್ರತಿ ವರ್ಷವೂ ಉಪಾಕರ್ಮ ಆಚರಿಸಬೇಕು. ಶ್ರಾವಣದಲ್ಲಿ ನೂಲ ಹುಣ್ಣೆಮೆಯಂದು ಬರುವ ಉಪಾಕರ್ಮ ಯಜ್ಞೋಪವೀತ ಧರಿಸಿದವರಿಗೆ ಅತಿ ಮುಖ್ಯವಾಗಿದೆ. ಹಾಗಾಗಿ ಶ್ರಾವಣ ಮಾಸದಲ್ಲಿ ಬರುವ ನೂಲ ಹುಣ್ಣಿಮೆ ವಿಶೇಷ.

LEAVE A REPLY

Please enter your comment!
Please enter your name here

Hot Topics