Connect with us

    ಉಳ್ಳಾಲದಲ್ಲಿ ಜನರ ನೆಮ್ಮದಿ ಕೆಡಿಸಿದ ಟಾರ್‌ ಮಿಶ್ರಣ : ಪ್ರತಿಭಟನೆಗಿಳಿದ ಶಾಲಾ ಮಕ್ಕಳು

    Published

    on

    ಉಳ್ಳಾಲದಲ್ಲಿ ಜನರ ನೆಮ್ಮದಿ ಕೆಡಿಸಿದ ಟಾರ್‌ ಮಿಶ್ರಣ : ಪ್ರತಿಭಟನೆಗಿಳಿದ ಶಾಲಾ ಮಕ್ಕಳು

    ಮಂಗಳೂರು : ಉಳ್ಳಾಲದ ಸೋಮೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಕೊಲ್ಯದ ಶಾರದಾ ಭವನದ ಹಿಂದಿನ ಖಾಸಗಿ ಮೈದಾನದಲ್ಲಿ ಉಳ್ಳಾಲ ನಗರಸಭಾ ವ್ಯಾಪ್ತಿಯ ನಗರೋತ್ಥಾನ ಟೆಂಡರ್ ನ ಕಾಮಗಾರಿಯ ಸಾಮಾಗ್ರಿಗಳು ಕಳೆದ ಒಂದು ವರ್ಷದಿಂದ ದಾಸ್ತಾನು ಇಟ್ಟು ಅಲ್ಲೇ ಕಾಂಕ್ರಿಟ್ ಮಿಶ್ರಣ ಕಾರ್ಯವು ನಡೆಯುತ್ತಿತ್ತು.

    ಆದರೆ ನಿನ್ನೆ ಮದ್ಯಾಹ್ನದಿಂದ ಠಾರ್ ಮಿಶ್ರಣದ ಯಂತ್ರ ತಂದು ಡಾಮರ್ ಮಿಶ್ರಣದ ಕಾರ್ಯ ಆರಂಭಿಸಿದ್ದಾರೆ.

    ವಿಜಯನಂದ ಶೆಟ್ಟಿ ಎಂಬವರಿಗೆ ಟೆಂಡರು ಕಾರ್ಯ ವಹಿಸಲಾಗಿದ್ದು ಪರಿಸರಕ್ಕೆ ಮಾರಕವಾಗಿರುವ ಈ ಠಾರ್ ಮಿಶ್ರಣ ಕಾಮಗಾರಿಯೂ ಹತ್ತಿರ ಇರುವ ಶಾಲಾ ವಠಾರಕ್ಕೆ ಹಾಗೂ ಜನರಿಗೆ ಇದರ ಬಗ್ಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಇಂದು ಬೆಳಿಗ್ಗೆ ಠಾರ್ ಮಿಶ್ರಣ ಕಾರ್ಯ ನಡೆಸಲಾಗಿದ್ದು,ಠಾರ್ ನ ದಟ್ಟವಾದ  ದುರ್ವಾಸನೆಯುಕ್ತ ಹೊಗೆಯು ಸ್ಥಳೀಯ ಜಾಯ್ ಲ್ಯಾಂಡ್ ಶಾಲಾ ಕೊಠಡಿಗಳ ಒಳ ಸೇರಿ ವಿದ್ಯಾರ್ಥಿಗಳು,ಶಿಕ್ಷಕ ವೃಂದದವರು ಸಮಸ್ಯೆ ಎದುರಿಸುವಂತಾಗಿದೆ.

    ಬಳಿಕ ಕೂಡಲೇ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಸೇರಿ ಠಾರ್ ಮಿಶ್ರಣ ನಡೆಸುತ್ತಿದ್ದ ಸ್ಥಳಕ್ಕೆ ತೆರಳಿ ಕಾಮಗಾರಿ ನಿಲ್ಲಿಸುವಂತೆ ಹೇಳಿದ್ದಾರೆ.ಸ್ಥಳಕ್ಕೆ ಬಂದ ಉಳ್ಳಾಲ ಪೊಲೀಸರು ಗುತ್ತಿಗೆದಾರರಲ್ಲಿ ಠಾರ್ ಮಿಶ್ರಣ ಕಾಮಗಾರಿ ಬೇರೆಡೆ ನಡೆಸುವಂತೆ ತಿಳಿಸಿದ್ದಾರೆ.ಗುತ್ತಿಗೆದಾರರು ಸದ್ಯಕ್ಕೆ ಕಾಮಗಾರಿ ಸ್ಥಗಿತಗೊಳಿಸಿದ್ದು,ಠಾರ್ ಮಿಶ್ರಣದ ಯಂತ್ರವನ್ನು ಸ್ಥಳಾಂತರಿಸುವ ಬಗ್ಗೆ ಸ್ಥಳೀಯರು ಮತ್ತು ಶಾಲಾಡಳಿತ ಮಂಡಳಿಗೆ ಭರವಸೆ ನೀಡಿದ್ದಾರೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಧುರೀಣರು ಮಹಾಕುಂಭ ಮೇಳದಲ್ಲಿ ಭಾಗಿ

    Published

    on

    ಮಂಗಳೂರು/ಪ್ರಯಾಗ್‌ರಾಜ್ : 144 ವರ್ಷಕೊಮ್ಮೆ ನಡೆಯುವ ಮಹಾಕುಂಭ ಮೇಳ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿದೆ. ಇದೊಂದು ಅತಿದೊಡ್ಡ ಧಾರ್ಮಿಕ ಕಾರ್ಯಕ್ರಮವಾಗಿದ್ದು, ದೇಶ, ವಿದೇಶಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ರಾಜಕೀಯ ಧುರೀಣರು ಸಹ ಮಹಾಕುಂಭದ ಪವಿತ್ರ ಸ್ನಾನಕ್ಕೆ ನಿರ್ಧರಿಸಿದ್ದಾರೆ.

    ಪ್ರಧಾನಿ ನಮೋ ಫೆಬ್ರವರಿ 5 ರಂದು ಪ್ರಯಾಗರಾಜ್ ಗೆ ಭೇಟಿ ನೀಡಲಿದ್ದಾರೆ. ಪ್ರಮುಖ ಸರ್ಕಾರಿ ಯೋಜನೆಗಳನ್ನು ಪರಿಶೀಲಿಸುವ ಮತ್ತು ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾಧ್ಯತೆಯಿದೆ. ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಭದ್ರತೆಗಾಗಿ ವಿಶೇಷ ವ್ಯವಸ್ಥೆ ಮಾಡಲಾಗುತ್ತಿದೆ. ನಿಗದಿತ ಸಮಯದಲ್ಲಿ ಎಲ್ಲ ಸಿದ್ಧತೆಗಳನ್ನು ಪೂರ್ಣಗೊಳಿಸಬೇಕು ಎಂದು ಜಿಲ್ಲಾಡಳಿತ ಸೂಚನೆ ನೀಡಿದೆ.

     

    ಇದನ್ನೂ ಓದಿ : ಏನಿದು ಸಿಂಹಸ್ಥ ಕುಂಭಮೇಳ? ಇದರ ವಿಶೇಷತೆ ಏನು?

     

    ಜನವರಿ 22 ರಂದು ಉತ್ತರ ಪ್ರದೇಶದ ಯೋಗಿ ಸರ್ಕಾರ ಸಂಪುಟ ಸಭೆ ನಡೆಯಲಿದೆ. ಸಭೆಯಲ್ಲಿ ಮಹಾಕುಂಭ ವಿಚಾರ ಚರ್ಚೆಗೆ ಬರಲಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜನವರಿ 27 ರಂದು ಮಹಾಕುಂಭದಲ್ಲಿ ಭಾಗವಹಿಸಲಿದ್ದಾರೆ. ಫೆಬ್ರವರಿ 1 ರಂದು ಉಪರಾಷ್ಟ್ರಪತಿ ಜಗದೀಪ್ ಧನಕರ್ ತ್ರಿವೇಣಿ ಸಂಗಮಕ್ಕೆ ಬರಲಿದ್ದಾರೆ. ಫೆಬ್ರವರಿ 10 ರಂದು ರಾಷ್ಟ್ರಪತಿಗಳು ಆಗಮಿಸುವ ನಿರೀಕ್ಷೆ ಇದೆ. ವಿಐಪಿಗಳ ಭೇಟಿ ಗಮನದಲ್ಲಿಟ್ಟುಕೊಂಡು ಉತ್ತರ ಪ್ರದೇಶ ಪೊಲೀಸರು ಭದ್ರತೆಯನ್ನು ಬಿಗಿಗೊಳಿಸಿದ್ದಾರೆ. ಪ್ರಮುಖ ಸ್ಥಳಗಳಲ್ಲಿ ಭದ್ರತಾ ಪಡೆಗಳ ನಿಯೋಜನೆಯನ್ನು ಹೆಚ್ಚಿಸಲಾಗಿದೆ. ವಿಶೇಷ ಭದ್ರತಾ ತಂಡಗಳನ್ನು ಸಕ್ರಿಯಗೊಳಿಸಲಾಗಿದೆ. ಡ್ರೋನ್ ಮತ್ತು ಸಿಸಿಟಿವಿ ಕ್ಯಾಮೆರಾಗಳ ಮೂಲಕ ಕಣ್ಗಾವಲು ಇಡಲಾಗಿದೆ.

    Continue Reading

    LATEST NEWS

    ಭಾರತದ ಅಳಿಯ ಈಗ ಅಮೆರಿಕದ ಉಪಾಧ್ಯಕ್ಷ; ಸೆಕೆಂಡ್ ಲೇಡಿ ಉಷಾ ಚಿಲುಕುರಿ ಬಗ್ಗೆ ಗೊತ್ತಾ!?

    Published

    on

    ಮಂಗಳೂರು/ ವಾಷಿಂಗ್ಟನ್ : 47ನೇ ಯುಎಸ್ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಪ್ರಮಾಣ ವಚನ ಸ್ವೀಕರಿಸಿದರು. ಭಾರತದ ಅಳಿಯ ಜೆಡಿ ವ್ಯಾನ್ಸ್ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು.

    ಅಮೆರಿಕ ಚುನಾವಣೆಯಲ್ಲಿ ಟ್ರಂಪ್ ಅವರ ರಿಪಬ್ಲಿಕನ್ ಪಕ್ಷದ ಪರವಾಗಿ ನಿಂತಿದ್ದ ವ್ಯಾನ್ಸ್ ಇದೀಗ ಉಪಾಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಸದ್ಯ ಈ ಜೆಡಿ ವ್ಯಾನ್ಸ್‌ನತ್ತ ಎಲ್ಲರ ಚಿತ್ತ ಹರಿದಿದ್ದು ಜೊತೆಗೆ ಅವರೊಂದಿಗೆ ಕಾಣಿಸಿಕೊಂಡ ಅವರ ಪತ್ನಿ ಉಷಾ ಚಿಲುಕುರಿಯೂ ಪ್ರಮಾಣವಚನ ಕಾರ್ಯಕ್ರಮದಲ್ಲಿ ಗಮನಸೆಳೆದಿದ್ದಾರೆ. ಇದೀಗ ಇವರ ಹಿನ್ನಲೆ ಬಗ್ಗೆ ಸಹಜವಾಗೇ ಕುತೂಹಲ ಹುಟ್ಟಿದೆ.

     

    ಜೆಡಿ ವ್ಯಾನ್ಸ್ ಯಾರು?


    1984 ಆಗಸ್ಟ್ 2ರಂದು ಓಹಿಯೋದ ಮಿಡಲ್‌ಟೌನ್‌ನಲ್ಲಿ ಜನಿಸಿದ ಜೆಡಿ ವ್ಯಾನ್ಸ್ ಸದ್ಯ ಅಮೆರಿಕಾದ ಉಪಾಧ್ಯಕ್ಷ. ಇವರಿಗೂ ಭಾರತಕ್ಕೂ ಇರುವ ನಂಟು ಆಗಾಗ ಸುದ್ದಿಯಾಗುತ್ತಿರುತ್ತದೆ. ಜೆಡಿ ವ್ಯಾನ್ಸ್ ಬಾಲ್ಯದಲ್ಲಿ ಬಡತನ ಕಂಡವರು. ತಾಯಿಗೆ ದುಷ್ಚಟಗಳಿದ್ದರಿಂದ ವ್ಯಾನ್ಸ್ ತಂದೆಯ ಆಸರೆಯಲ್ಲಿ ಬೆಳೆದರು. ಓಹಿಯೋ ಸ್ಟೇಟ್ ಯೂನಿವರ್ಸಿಟಿ ಮತ್ತು ಯೇಲ್ ಲಾ ಸ್ಕೂಲ್‌ನಲ್ಲಿ ಓದಿದ ವ್ಯಾನ್ಸ್ ಬಳಿಕ,  ಸಿಲಿಕಾನ್ ವ್ಯಾಲಿಯಲ್ಲಿ ವೆಂಚರ್ ಕ್ಯಾಪಿಟಲಿಸ್ಟ್ ಆಗಿ  ಕೆಲಸಕ್ಕೆ ಸೇರಿದರು. ವ್ಯಾನ್ಸ್ ಒಬ್ಬ ರಾಜಕಾರಣಿ, ಲೇಖಕನೂ ಹೌದು. ಓಹಿಯೋದಿಂದ ಜೂನಿಯರ್ ಸೆನೆಟರ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ.

    ಭಾರತದೊಂದಿಗಿದೆ ವ್ಯಾನ್ಸ್ ನಂಟು:

    ವ್ಯಾನ್ಸ್‌ಗೆ ಭಾರತದೊಂದಿಗೆ ಪ್ರಮುಖ ನಂಟೊಂದು ಬೆಸೆದಿದೆ. ಅವರು  ಭಾರತದ ಅಳಿಯ. ಅವರು ವರಿಸಿರುವುದು ಭಾರತೀಯ ಮೂಲದ ಉಷಾ ಚಿಲುಕುರಿ ಎಂಬವರನ್ನು. ಹಾಗಾಗಿ ಭಾರತದೊಂದಿಗೆ ವ್ಯಾನ್ಸ್ ನಂಟು ದೊಡ್ಡದೆಂದರೆ ತಪ್ಪಾಗಲಾರದು. ಅಂದ್ಹಾಗೆ ವ್ಯಾನ್ಸ್ ಹಾಗೂ ಉಷಾ 2014ರಲ್ಲಿ ಮದುವೆಯಾದರು.  ದಂಪತಿಗೆ ಐವಾನ್, ವಿವೇಕ್ ಮತ್ತು ಮಿರಾಬೆಲ್ ಎಂಬ ಮೂವರು ಮಕ್ಕಳಿದ್ದಾರೆ.

    ಇದನ್ನೂ ಓದಿ : ಕಾಂತಾರ ಚಾಪ್ಟರ್ 1 ಗೆ ಸಂಕಷ್ಟ; ಎಡವಟ್ಟು ಮಾಡಿಕೊಂಡ್ರಾ ರಿಷಬ್ ಶೆಟ್ಟಿ!

    ಉಷಾ ಚಿಲುಕುರಿ ಭಾರತದ ರಾಜ್ಯವಾದ ಆಂಧ್ರಪ್ರದೇಶ ಮೂಲದವರು. ಉಷಾ ಹಿಂದೂ ಆಗಿದ್ದರೆ, ವ್ಯಾನ್ಸ್ ರೋಮನ್ ಕ್ಯಾಥೋಲಿಕ್. ಆಂಧ್ರದ ಅಳಿಯ ಈಗ ದೊಡ್ಡಣ್ಣನ ಉಪಾಧ್ಯಕ್ಷ. ಹೀಗಾಗಿ ಉಷಾ ಚಿಲುಕುರಿ ಹೆಸರೂ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

    ಉಷಾ  ಎಲ್ಲಿಯವರು?

    ರಿಪಬ್ಲಿಕನ್ ಪಕ್ಷದ ಉಪಾಧ್ಯಕ್ಷ ಅಭ್ಯರ್ಥಿ ಜೆಡಿ ವ್ಯಾನ್ಸ್ ಅವರ ಪತ್ನಿ ಉಷಾ ಚಿಲುಕುರಿ ಭಾರತೀಯ ಮೂಲದವರು. ಅವರು ಸ್ಯಾನ್ ಫ್ರಾನ್ಸಿಸ್ಕೋದ ಹಿರಿಯ ವಕೀಲೆ. ಉಷಾ ಅವರ ಪೋಷಕರು ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯ ಪಮಾರು ಗ್ರಾಮದ ನಿವಾಸಿಗಳು. ಅಪ್ಪ ಚಿಲುಕುರಿ ರಾಧಾಕೃಷ್ಣ ಮತ್ತು ತಾಯಿ ಲಕ್ಷ್ಮೀ. 1980ರಲ್ಲಿ ಅವರು ಅಮೆರಿಕಕ್ಕೆ ತೆರಳಿದರು. ಉಷಾ ಹುಟ್ಟಿದ್ದು ಕ್ಯಾಲಿಫೋರ್ನಿಯಾದಲ್ಲಿ. ಅಂದ್ಹಾಗೆ ಉಷಾ ತಂದೆ ಇಂಜಿನಿಯರ್, ತಾಯಿ ಜೀವ ವಿಜ್ಞಾನಿ.

    ಉಷಾ ಅವರು ಯೇಲ್ ವಿಶ್ವವಿದ್ಯಾಲಯದಿಂದ ಇತಿಹಾಸವನ್ನು ಅಧ್ಯಯನ ಮಾಡಿದರು. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದಿಂದ ಆಧುನಿಕ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಯೇಲ್ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದಾಗ, ಅವರು ಜೆಡಿ ವ್ಯಾನ್ಸ್ ಅವರನ್ನು ಭೇಟಿಯಾದರು. ಉಷಾ ಮತ್ತು ವ್ಯಾನ್ಸ್ ಕೆಂಟುಕಿಯಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು.

    Continue Reading

    DAKSHINA KANNADA

    ಕಾರ್ಕಳ : ಕಲಿಯಲು ಕಷ್ಟ ಎಂದು ಪ್ರಾ*ಣ ಕಳೆದುಕೊಂಡ ವಿದ್ಯಾರ್ಥಿ

    Published

    on

    ಕಾರ್ಕಳ: ಕಾಲೇಜಿನಲ್ಲಿ ಕಲಿಯಲು ಕಷ್ಟವಾಗುತ್ತಿದೆ ಎಂಬ ಕಾರಣಕ್ಕೆ ಎಂಬಿಎ ವಿದ್ಯಾರ್ಥಿಯೋರ್ವ ಆ*ತ್ಮಹ*ತ್ಯೆ ಮಾಡಿಕೊಂಡ ಘಟನೆ ಜ.19ರಂದು ರಾತ್ರಿ ಕಾರ್ಕಳದಲ್ಲಿ ನಡೆದಿದೆ.

    ಕಾರ್ಕಳದ ಕೆ.ಸುಧಾಕರ ಎಂಬವರ ಪುತ್ರ ಕೆ.ವೆಂಕಟೇಶ (22) ಆ*ತ್ಮಹ*ತ್ಯೆಗೆ ಶರಣಾದ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.

    ಮಂಗಳೂರು ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಎಂಬಿಎ ವಿದ್ಯಾಭ್ಯಾಸ ಮಾಡುತ್ತಿದ್ದು, ವಿದ್ಯಾಭ್ಯಾಸ ಮಾಡಲು ಕಷ್ಟವಾಗುತ್ತಿರುವ ಬಗ್ಗೆ ತಂದೆಯನ್ನು ಹೇಳುತ್ತಿದ್ದನು.

    ಸುಮಾರು 10 ದಿನಗಳಿಂದ ಮೌನವಾಗಿದ್ದು, ಇದೇ ಕಾರಣದಿಂದ ಅವರು ಮನೆಯ ಹಿಂದುಗಡೆ ಇರುವ ಬಾವಿಗೆ ಹಾರಿ ಆ*ತ್ಮಹ*ತ್ಯೆ ಮಾಡಿಕೊಂಡಿದ್ದಾರೆಂದು ತಿಳಿದುಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

    Continue Reading

    LATEST NEWS

    Trending