ಉಡುಪಿ ಇತ್ತಂಡಗಳ ನಡುವೆ ಮಾರಾಮಾರಿ :ಮೂರು ಬೈಕ್ ಬೆಂಕಿಗಾಹುತಿ!..
ಉಡುಪಿ:ಉಡುಪಿಯಲ್ಲಿ ಗುಂಪು ಘರ್ಷಣೆ ಸಂಭವಿಸಿದೆ.ಇತ್ತಂಡಗಳ ನಡುವೆ ನಡೆದ ತಲವಾರು ಕಾಳಗದಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ.
ಘಟನೆ ಸಂದರ್ಭ ಮೂರು ಬೈಕ್ ಗಳು ಸಂಪೂರ್ಣ ಸುಟ್ಟು ಕರಕಲಾಗಿದೆ. ಉಡುಪಿ ಜಿಲ್ಲೆಯ ಕೊಳಲಗಿರಿ ಸರಕಾರಿ ಶಾಲೆ ಬಳಿ ನಿನ್ನೆ ರಾತ್ರಿ ಘಟನೆ ನಡೆದಿದ್ದು ಕುಡಿದ ಮತ್ತಿನಲ್ಲಿ ಇತ್ತಂಡಗಳು ಪರಸ್ಪರ ಮಾರಕಾಸ್ತ್ರಗಳಿಂದ ಮಾರಾಮಾರಿ ನಡೆಸಿವೆ ಎಂದು ಹೇಳಲಾಗಿದೆ.
ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಈ ಸಂಬಂಧ ಐವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.