LATEST NEWS
ಆನೆದಂತ ಮಾರಾಟಕ್ಕೆ ಯತ್ನ: ಮೂವರು ಆರೋಪಿಗಳ ಸೆರೆ!
ಆನೆದಂತ ಮಾರಾಟಕ್ಕೆ ಯತ್ನ: ಮೂವರು ಆರೋಪಿಗಳ ಸೆರೆ
ಬೆಂಗಳೂರು : ಆನೆ ದಂತ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಂಧ್ರ ಪ್ರದೇಶ ಮೂಲದ ಮೂವರು ಆರೋಪಿಗಳನ್ನು ಹೆಬ್ಬಾಳ ಪೊಲೀಸರು ಬಂಧಿಸಿದ್ದಾರೆ.ಚಿತ್ತೂರು ಜಿಲ್ಲೆಯ ಗುಟ್ಟುಪಾಳ್ಯಂ ನಿವಾಸಿ ಲೋಕೇಶ್, ಮದನಪಲ್ಲಿಯ ಪೂಲಾಕುಟ್ಲಪುರ ನಿವಾಸಿ ಮಂಜುನಾಥ್ ಎನ್. ಶ್ರೀಹರಿಪುರ ನಿವಾಸಿ ಗೋವಿ ವಿ. ಎಂಬುವರು ಬಂಧನಕ್ಕೆ ಒಳಗಾದವರು.
ಸೋಮವಾರ ಮಧ್ಯಾಹ್ನ ಹೆಬ್ಬಾಳದ ಗುಡ್ಡದಹಳ್ಳಿ ಟೆಂಪೋ ನಿಲ್ದಾಣ ಬಳಿ ಆನೆ ದಂತ ಮಾರಲು ಯತ್ನಿಸಿದ್ದರು.ಖಚಿತ ಮಾಹಿತಿ ಆಧರಿಸಿ ಹೆಬ್ಬಾಳ ಪೊಲೀಸರು ದಾಳಿ ನಡೆಸಿ, ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ಆನೆ ದಂತ ವಶಪಡಿಸಿಕೊಂಡಿದ್ದಾರೆ.
ಹೆಚ್ಚಿನ ವಿಚಾರಣೆ ನಡೆಸಿದಾಗ ಸಮೀಪದ ಮರಳು ಲಾರಿ ಸ್ಟ್ಯಾಂಡ್ ಬಳಿ ಮೂರು ಆನೆ ದಂತ ಇಟ್ಟಿರುವ ಸಂಗತಿ ಬಾಯಿ ಬಿಟ್ಟಿದ್ದಾರೆ.
ಆರೋಪಿಗಳೆಲ್ಲರೂ ಕೂಲಿ ಕೆಲಸ ಮಾಡಿಕೊಂಡಿದ್ದು, ಗೋಪಿ ಎಂಬಾತ ಲೋಕೇಶ್‌ಗೆ ಆನೆ ದಂತಗಳನ್ನು ನೀಡಿದ್ದಾನೆ. ಹೆಚ್ಚಿನ ಬೆಲೆಗೆ ಮಾರಾಟ ಮಾಡಿಕೊಟ್ಟರೆ ಕಮೀಷನ್ ನೀಡುವುದಾಗಿ ಹೇಳಿದ್ದು, ಅದರಂತೆ ತನ್ನ ಸ್ನೇಹಿತರೊಂದಿಗೆ ಸೇರಿ ಆನೆ ದಂತಗಳನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡಲು ಪ್ರಯತ್ನಿಸಿದ್ದಾಗಿ ವಿಚಾರಣೆ ವೇಳೆ ತಿಳಿದು ಬಂದಿದೆ.
ಹೆಬ್ಬಾಳ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಶೋಧ ನಡೆಸುತ್ತಿದ್ದಾರೆ.
DAKSHINA KANNADA
Surathkal: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ- ವಿದ್ಯಾರ್ಥಿನಿಯರು ಗಂಭೀರ..!
ಸುರತ್ಕಲ್: ರಸ್ತೆ ದಾಟುತ್ತಿದ್ದ ವೇಳೆ ರಾಂಗ್ ಸೈಡ್‌ನಿಂದ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರಿಗೆ ಗಂಭೀರ ಗಾಯಗೊಂಡ ಘಟನೆ ಸುರತ್ಕಲ್ ಜಂಕ್ಷನ್ ಬಳಿ ನಡೆದಿದೆ.
ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ಕೇರಳ ಮೂಲದ ವಿದ್ಯಾರ್ಥಿನಿ ಗಾಯಗೊಂಡವರು ಎಂದು ತಿಳಿದು ಬಂದಿದೆ. ಇನ್ನೋರ್ವಳ ಸ್ಥಿತಿ ಚಿಂತಾಜನಕವಾಗಿದ್ದು. ಇನ್ನೊಬ್ಬಳಿಗೆ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಅಗಮಿಸಿದ ಸುರತ್ಕಲ್ ಪೊಲೀಸರು ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ
bangalore
ಸ್ನೇಹಿತ್ ಔಟ್- ನಮ್ರತಾ- ಸ್ನೇಹಿತ್ ಲವ್ ಸ್ಟೋರಿಗೆ ಬ್ರೇಕ್..!
ಬಿಗ್ ಬಾಸ್: ಬಿಗ್ ಬಾಸ್ ಮನೆ ಆಟ ಇದೀಗ 60 ದಿನಗಳ ಪೂರೈಸಿದೆ. ಪ್ರತಿ ವಾರವು ಸ್ಪರ್ಧೆಗಳ ಸಂಖ್ಯೆ ಇಳಿಕೆಯಾಗುತ್ತಿದ್ದು, ಎಲಿಮಿನೆಟ್ ಆಗುತ್ತಿದ್ದಾರೆ. ಈ ವಾರವು ಸ್ನೇಹಿತ್ ಔಟ್ ಆಗಿದ್ದಾರೆ.
ಹಿಂದಿನ ವಾರದಲ್ಲಿ ಸ್ನೇಹಿತ್ ನಮ್ರತಾ ಜೊತೆ ಲವ್ವಿ-ಡವ್ವಿ ವಿಷಯಗಳನ್ನು ಮಾತನಾಡುತ್ತಿದ್ದರು. ನಮ್ರತಾ ಜೊತೆ ಬೆಸ್ಟ್ ಫ್ರೇಂಡ್ ಆಗಿದ್ದ ಸ್ನೇಹಿತ್ ಟಾಸ್ಕ್ ಗಳಲ್ಲಿ ಗೆಲ್ಲುತ್ತಿದ್ದರೂ, ಕೊನೆ ಕೊನೆಗೆ ಆಟದ ವಿಚಾರದಲ್ಲಿ ಬಹಳಷ್ಟು ಕಡೆ ಎಡವಿದ್ದರು. ಸ್ನೇಹಿತ್ ಕ್ಯಾಪ್ಟನ್ಸಿ ಆಗಿದ್ದಾಗ ಎರಡು ತಂಡಗಳ ಜೊತೆ ಪಕ್ಷಪಾತ ಮಾಡುತ್ತಿದ್ದರು. ಒಂದು ಟೀಮ್ ಗೆ ಮಾತ್ರ ಸಪೋರ್ಟ್ ಮಾಡುತ್ತಿದ್ದರು.
ಸ್ನೇಹಿತ್ ನಿರ್ಧಾರದಿಂದ ಕ್ಯಾಪ್ಟನ್ ಆಗಿ ಮುಂದೆ ಬರಬೇಕಿದ್ದ ಕಡೆಯಲ್ಲಾ ಎಡವಿದ್ದೇ ಜಾಸ್ತಿ. ಹಾಗಾಗಿ ಗಂಧರ್ವರು- ರಾಕ್ಷಸರು ಎಂಬ ತಂಡಗಳ ನಡುವೆ ಜಗಳಗಳು ಹೆಚ್ಚಾಗಿತ್ತು. ಇದೇ ಟಾಸ್ಕ್ ನಲ್ಲಿ ಡ್ರೋನ್ ಪ್ರತಾಪ್ ಸಂಗೀತಾ ಕಣ್ಣಿಗೆ ಪೆಟ್ಟಾಗಿದ್ದು, ಇದಕ್ಕೆ ಪರೋಕ್ಷವಾಗಿ ಸ್ನೇಹಿತೇ ಕಾರಣರಾದರು. ಟಾಸ್ಕ್ ನಿಲ್ಲಿಸುವ ಅಧಿಕಾರ ಕೈಯಲ್ಲಿತ್ತು. ಆದರೆ ಏನೂ ಮಾತನಾಡಲೂ ಮುಂದೆ ಹೋಗಿಲ್ಲ. ಸ್ನೇಹಿತ್ ನಿರ್ಧಾರಕ್ಕೆ ಪ್ರೇಕ್ಷಕರು ಕೂಡ ಅಸಮಾಧಾನ ವ್ಯಕ್ತಪಡಿಸಿದ್ದರು. ಸ್ನೇಹಿತ್ ನ ನಡೆತೆಯಿಂದ ಇದೀಗ ಅವರ ಬಿಗ್ ಬಾಸ್ ನಿಂದ ಹೊರ ಹೋಗಿದ್ದಾರೆ.
ವಿನಯ್ ಗೌಡ ಮತ್ತು ನಮೃತಾ ಗೌಡ ಜೊತೆಯಷ್ಟೇ ಕಂಫರ್ಟ್ ಝೋನ್ ಕ್ರಿಯೇಟ್ ಮಾಡಿಕೊಂಡು, ಕ್ಯಾಪ್ಟನ್ ಆಗಿದ್ರೂ ಅವರ ಪರವಾಗೇ ಆಡುತ್ತಿದ್ದ ಸ್ನೇಹಿತ್ ಎಲಿಮಿನೇಟ್ ಆಗಿದ್ದಾರೆ. ಸದ್ಯ ಸ್ನೇಹಿತ್ ಎಲಿಮಿನೇಷನ್ ನಿಂದ ವಿನಯ್ & ಟೀಮ್ ಶಾಕ್ ಆಗಿದೆ. ನಮ್ರತಾ ಗೌಡ ಜೊತೆ ಲವ್ವಿ ಡವ್ವಿ ಅಂತ ಹಿಂದೆ ಬೀಳತ್ತಿದ್ದ ಸ್ನೇಹಿತ್ ಮುಂದಿನ ನಡೆಯೇನು? ಬಿಗ್ ಬಾಸ್ ಆಟದ ನಂತರ ಮುಂದಿನ ದಿನಗಳಲ್ಲಿ ನಮ್ರತಾ ಮೆಚ್ಚಿ ಸ್ನೇಹಿತ್ ಒಪ್ಪಿಕೊಳ್ತಾರಾ ಕಾಯಬೇಕಿದೆ.
ಅಂತೂ ಬಿಗ್ ಬಾಸ್ ನಿಂದ ಸ್ನೇಹಿತ್ ಔಟ್ ಆದಾಗ ನಮ್ರತಾ ಬಿಕ್ಕಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಇವರ ಲವ್ ಸ್ಟೋರಿ ಬ್ರೇಕ್ ಆಗುತ್ತಾ ಅಲ್ಲ ಬಿಗ್ ಮನೆಯಿಂದ ಹೊರ ಹೋದ ಬಳಿಕ ಮುಂದುವರಿಯುತ್ತಾ ಅನ್ನೋದು ಕಾದು ನೋಡಬೇಕಷ್ಟೇ.
LATEST NEWS
ಕ್ರೇಟ್ ಗೆ ಪಿಕಪ್ ಢಿಕ್ಕಿ-ಸಾವಿರಾರು ರೂ. ಮೌಲ್ಯದ ನಂದಿನಿ ಹಾಲು ರಸ್ತೆ ಪಾಲು
ಉಡುಪಿ: ಮಿಲ್ಕ್ ಬೂತ್ ಎದುರು ಕ್ರೇಟ್‌ನಲ್ಲಿ ಇರಿಸಿದ್ದ ನಂದಿನಿ ಹಾಲಿನ ಶೇಖರಣೆಗೆ ಪಿಕಪ್ ವಾಹನವೊಂದು ಢಿಕ್ಕಿ ಹೊಡೆದು ಸಾವಿರಾರು ರೂಪಾಯಿ ಮೌಲ್ಯದ ನಂದಿನಿ ಹಾಲು ರಸ್ತೆ ಪಾಲಾದ ಘಟನೆ ಉಡುಪಿಯ ಕಡಿಯಾಳಿಯಲ್ಲಿ ಇಂದು ನಡೆದಿದೆ.
ಈ ಅಪಘಾತದಲ್ಲಿ ಬೈಕ್ ಹಾಗೂ ಸೈಕಲ್ ಸವಾರರಿಬ್ಬರು ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಮಣಿಪಾಲದಿಂದ ಉಡುಪಿ ಕಡೆಗೆ ತೆರಳುತ್ತಿದ್ದ ಪಿಕಪ್ ವಾಹನ ಚಾಲಕನು ದ್ವಿಚಕ್ರ ವಾಹನವೊಂದನ್ನು ತಪ್ಪಿಸಲು ಹೋಗಿ ರಸ್ತೆ ಬದಿ ಇರಿಸಿದ್ದ ಹಾಲಿನ ಕ್ರೇಟ್‌ಗಳಿಗೆ ಪಿಕಪ್ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಹಾಲಿನ ಪ್ಯಾಕೆಟ್ ಶೇಖರಿಸಿಟ್ಟಿದ್ದ ಕ್ರೇಟ್‌ಗಳೆಲ್ಲ ಚೆಲ್ಲಾ ಪಿಲ್ಲಿಯಾಗಿದ್ದು, ಅಪಾರ ಪ್ರಮಾಣದ ಹಾಲು ರಸ್ತೆ ಪಾಲಾಗಿದೆ. ಪಿಕಪ್ ವಾಹನ ಚಾಲಕನ ಅತೀ ವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಅವಘಡಕ್ಕೆ ಕಾರಣ ಎನ್ನಲಾಗಿದ್ದು, ಪಿಕಪ್ ಚಾಲಕ ಪರಾರಿಯಾಗಿದ್ದಾನೆ. ಈ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- FILM5 days ago
ರಾತ್ರಿ 12.30ಕ್ಕೆ ಆಡಿಷನ್..2.30ಕ್ಕೆ ಆಯ್ಕೆ-ಬೃಂದಾವನ ಸೀರಿಯಲ್ ಹೀರೋ ಕ್ಲಾರಿಟಿ
- FILM4 days ago
ನಮೃತಾ ಗೌಡ ಆವಾಜ್ ಗೆ ಸಂಗೀತಾ ಕಣ್ಣೀರು
- bengaluru7 days ago
Film: ಕಾಂತಾರ ಖ್ಯಾತಿಯ ಸಪ್ತಮಿ ಗೌಡ ಟಾಲಿವುಡ್ ಗೆ ಎಂಟ್ರಿ
- bengaluru5 days ago
ಹೈಕೋರ್ಟ್ ಕಲಾಪವನ್ನೂ ಬಿಡದ ಸೈಬರ್ ಹ್ಯಾಕರ್ಸ್-ವಿಡಿಯೋ ಕಾನ್ಫರೆನ್ಸ್ ಆ್ಯಪ್ನಲ್ಲಿ ಅಶ್ಲೀಲ ದೃಶ್ಯ ಅಪ್ಲೋಡ್